ಚನ್ನಪಟ್ಟಣ ತಾಲೂಕಿನ ಮಾಕಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ವಿವಿಧ ಜಾತಿಯ ಹಣ್ಣಿನ ಗಿಡ ನೇಡುವ ಕಾರ್ಯಕ್ರಮ ನಡೆಯಿತು. ಜಾಕೀರ್ ಹುಸೇನ್,ರಾಮಲಿಂಗಯ್ಯ, ರಾಮಣ್ಣ, ವಿರೇಶ್, ದಿಲೀಪ್ ಇದ್ದರು
ಗಿಡ ನೆಡುವುದು ಕೇವಲ ಒಂದು ದಿನದ ಆಚರಣೆಯಾಗದೇ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು, ಪ್ರಾಣಿ-ಪಕ್ಷಿಗಳು ಹಾಗೂ ಗಿಡ ಮರ ಸಮೃದ್ಧವಾಗಿದ್ದರೆ ಮಾತ್ರ ಮನುಕುಲದ ಪ್ರಗತಿಯ ಜತೆಗೆ ಜೀವಸಂಕುಲ ಸಮೃದ್ಧವಾಗಿರುತ್ತದೆ ಎಂದು ಚನ್ನಪಟ್ಟಣ ರೋಟರಿ ಟಾಯ್ಸ ಸಿಟಿ ಅಧ್ಯಕ್ಷ ಸಂತೋಷ್ ಪಾಪಣ್ಣ ತಿಳಿಸಿದರು.
ತಾಲೂಕಿನ ಮಾಕಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ವಿವಿಧ ಜಾತಿಯ ಹಣ್ಣಿನ ಗಿಡ ನೆಟ್ಟು ಮಾತನಾಡಿ, ಮುಂದಿನ ಯುವಪೀಳಿಗೆಗೆ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಪಾಲುದಾರರಾಗಬೇಕು.
ಸಸಿ ಬೆಳೆಸುವುದು ಪ್ರತಿಯೊಂದು ಮಗುವಿನ ಆದ್ಯತೆಯಾಗಬೇಕು. ನೆಟ್ಟ ಗಿಡಕ್ಕೆ ಮಕ್ಕಳು ನೀರೆರದು ಪೋಷಣೆ ಮಾಡಬೇಕು. ಮುಂದಿನ ಪೀಳಿಗೆಗಳಿಗೆ ಪರಿಸರ ಜಾಗೃತಿ ಸಂಕೇತವಾಗಲಿದೆ ಎಂದು ತಿಳಿಸಿದರು.
ಕಾರ್ಯದರ್ಶಿ ಆದರ್ಶಕುಮಾರ್ ಮಾತನಾಡಿ, ಪರಿಸರ ಉಳಿಸುವ ಕೆಲಸ ಯುವ ಸಮೂಹ ಮಾಡಬೇಕು. ಗ್ರಾಮ ಹಸಿರಾಗಿದ್ದರೆ ಜನರ ಸ್ವಾಸ್ಥ್ಯ ಉತ್ತಮವಾಗಿರುತ್ತದೆ. ಸಸಿ ನೆಡುವುದು ಪರಿಸರವನ್ನು ಉಳಿಸಲು ಮತ್ತು ಉತ್ತಮ ಆಮ್ಲಜನಕ ಪಡೆಯಲು ಮುಖ್ಯ ಎಂದರು.
ಜ್ಞಾನಸರೋವರ ಪದವಿ ಫೂರ್ವ ಕಾಲೇಜಿನ ಉಪನ್ಯಾಸಕ ಜಾಕೀರ್ ಹುಸೇನ್, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮಲಿಂಗಯ್ಯ, ರಾಮಣ್ಣ, ವಿರೇಶ್, ದಿಲೀಪ್ ಇದ್ದರು.