ಶಿಣ, ಉದ್ಯೋಗ ಸೇರಿದಂತೆ ವಿವಿಧ ಕೆಲಸಕಾರ್ಯ ನಿಮಿತ್ತ ಈಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವುದು ಅನಿವಾರ್ಯ. ಆದರೆ, ಬೆಳಗ್ಗೆ 6ರಿಂದ 11.30ರವರೆಗೆ 5 ಕೆಎಸ್ಆರ್ಟಿಸಿ ಬಸ್ಗಳು ಸೇರಿ 5 ಟ್ರಿಪ್ ಸಂಚರಿಸಿದರೆ ಸಂಜೆ 5 ಗಂಟೆವರೆಗೆ ಯಾವುದೇ ಬಸ್ ಇಲ್ಲ. 5 ಗಂಟೆಗೆ ಕುದೂರಿನಿಂದ ಹೊರಡುವ ಬಸ್ 10.30ಕ್ಕೆ ಮರಳುತ್ತದೆ. ಶಕ್ತಿ ಯೋಜನೆ ಜಾರಿಯಾದ ಮೇಲೆ ಈಗಿರುವ ಬಸ್ಗಳೂ ಸಾಕಾಗುತ್ತಿಲ್ಲ. ಒಂದು ಈ ಬಸ್ಗಳು ತಪ್ಪಿದರೆ ಸೋಲೂರು, ಮರೂರು ಹ್ಯಾಂಡ್ಪೋಸ್ಟ್ ಬಳಿಯ ಹೆದ್ದಾರಿ ಬದಿ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಬಿಸಿಲು, ಮಳೆ ಲೆಕ್ಕಿಸದೆ ಬೆಂಗಳೂರು ಬಸ್ಗೆ ಕಾಯಬೇಕು. ಆದ್ದರಿಂದ ಹೆಚ್ಚುವರಿ ಬಸ್ಗಳ ಸಂಚಾರ, ಬಿಎಂಟಿಸಿ ಸೇವೆ ಒತ್ತಾಯಿಸಿದ್ದಾರೆ.