ಬೋನಿಗೆ ಬಿದ್ದ ಚಿರತೆ

ಕನಕಪುರ ಮಳಗಾಳು ಬಳಿ ಬೋನಿಗೆ ಸೆರೆಬಿದ್ದ ಚಿರತೆ
ಕನಕಪುರ ಮಳಗಾಳು ಬಳಿ ಬೋನಿಗೆ ಸೆರೆಬಿದ್ದ ಚಿರತೆ
Published on
ಕನಕಪುರ: ನಗರ ಸಮೀಪದ ಮಳಗಾಳು ಗ್ರಾಮದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಗುರುವಾರ ತಾತ್ರಿ ಚಿರತೆಯೊಂದು ಸಿಕ್ಕಿ ಬಿದ್ದಿದೆ.
ಗ್ರಾಮದ ರಾಕೇಶ್​ ಎಂಬುವವರ ಮನೆ ಬಳಿ ಕಟ್ಟಿಹಾಕಿದ್ದ ಕುರಿ, ಮೇಕೆ, ಟರ್ಕಿ ಕೋಳಿಗಳನ್ನು ತಿಂದು ಪರಾರಿಯಾಗಿದ್ದ ಚಿರತೆ ಗ್ರಾಮಸ್ಥರನ್ನು ಭಯ ಗೊಳಿಸಿತ್ತು. ಅದರಂತೆ ಮೇ 13ರಂದು ಗ್ರಾಮಸ್ಥರ ಮನವಿಯಂತೆ ವಲಯ ಅರಣ್ಯ ಅಧಿಕಾರಿ ರವಿ ಮತ್ತು ಸಿಬ್ಬಂದಿ ಬೋನು ಅಳವಡಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಾದ ರವಿ, ಶಿವಕುಮಾರ್​, ಸಿಬ್ಬಂದಿ ಸೆರೆಸಿಕ್ಕ ಚಿರತೆಯನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net