ಕನಕಪುರ: ತಾಲೂಕಿನ ಕಸಬಾ ಹೋಬಳಿ ಶಿವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಶಾಲೆ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮಂಗಳವಾರ 4 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
ಕಳೆದವಾರ ರಾಮನಹಳ್ಳಿ ಬಳಿ ಜಿಂಕೆಯೊಂದನ್ನು ಬೇಟೆಯಾಡಿ ಚಿರತೆ ಪರಾರಿಯಾಗಿತ್ತು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯ ರೂಪಿಸಿ ಬೋನು ಇಟ್ಟಿದ್ದರು.
ವಲಯ ಅರಣ್ಯಾಧಿಕಾರಿ ರವಿ ಹಾಗೂ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ಅವರು ಸೆರೆ ಸಿಕ್ಕ ಚಿರತೆಯನ್ನು ವನ್ಯಜಿವಿಧಾಮಕ್ಕೆ ಬಿಟ್ಟಿದ್ದಾರೆ. ಬೀಟ್ ಫಾರೆಸ್ಟರ್ ಅಣ್ಣಯ್ಯ, ವನಪಾಲಕರಾದ ರಾಹುಲ್, ವಹೀಬ್ ಇದ್ದರು.