ಬೇನಾಮಿ ಆಸ್ತಿ ಮಾರಿಕೊಳ್ಳಲು ಭೂಸ್ವಾಧಿನ Benami Property

ಬೈರಮಂಗಲ ಶ್ರೀರಾಮ ದೇಗುಲ ಬಳಿ ರೈತರು ಕೈಗೊಂಡಿರುವ ಧರಣಿಗೆ ಬೆಂಬಲಿಸಿ ರಾಜ್ಯ ರೈತ ಸಂದ ಉಪಾಧ್ಯ ಮಲ್ಲಯ್ಯ ಮಾತನಾಡಿದರು. ಸಂಚಾಲಕ ಚೀಲೂರು ಮುನಿರಾಜು, ಜಯಕರ್ನಾಟಕ ಸಂಟನೆ ಸಲಹೆಗಾರ ಕುಮಾರಸ್ವಾಮಿ, ಮಾಗಡಿ ತಾಲೂಕು ರೈತ ಸಂದ ಅಧ್ಯ ಹೊಸಪಾಳ್ಯ ಲೋಕೇಶ್​, ನಾಗವಾರ ಶಂಭೂಗೌಡ, ರೈತ ಹೋರಾಟ ಹಿತರಣಾ ಸಂದ ಅಧ್ಯ ರಾಮಯ್ಯ ಇದ್ದರು.
ಬೈರಮಂಗಲ ಶ್ರೀರಾಮ ದೇಗುಲ ಬಳಿ ರೈತರು ಕೈಗೊಂಡಿರುವ ಧರಣಿಗೆ ಬೆಂಬಲಿಸಿ ರಾಜ್ಯ ರೈತ ಸಂದ ಉಪಾಧ್ಯ ಮಲ್ಲಯ್ಯ ಮಾತನಾಡಿದರು. ಸಂಚಾಲಕ ಚೀಲೂರು ಮುನಿರಾಜು, ಜಯಕರ್ನಾಟಕ ಸಂಟನೆ ಸಲಹೆಗಾರ ಕುಮಾರಸ್ವಾಮಿ, ಮಾಗಡಿ ತಾಲೂಕು ರೈತ ಸಂದ ಅಧ್ಯ ಹೊಸಪಾಳ್ಯ ಲೋಕೇಶ್​, ನಾಗವಾರ ಶಂಭೂಗೌಡ, ರೈತ ಹೋರಾಟ ಹಿತರಣಾ ಸಂದ ಅಧ್ಯ ರಾಮಯ್ಯ ಇದ್ದರು.
Published on

ರೈತ ಸಂ ಆರೋಪ > ಬಿಡದಿ ಉಪನಗರ ವಿರೋಧಿ ಹೋರಾಟಕ್ಕೆ ಬೆಂಬಲ

ಬಿಡದಿ: ಭೂಸ್ವಾಧಿನ ವಿರೋಧಿಸಿ ಬೈರಮಂಗಲ ಶ್ರೀರಾಮ ದೇಗುಲ ಮುಂದೆ ರೈತರು ಕೈಗೊಂಡಿರುವ ಅಹೋರಾತ್ರಿ ಧರಣಿ ಮಂಗಳವಾರ 240ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ರೈತ ಸಂದ ನೇತೃತ್ವದಲ್ಲಿ ಚನ್ನಪಟ್ಟಣ, ಮಾಗಡಿ, ಕನಕಪುರ ತಾಲೂಕುಗಳು ಸೇರಿ ಜಿಲ್ಲಾಕೇಂದ್ರ ರಾಮನಗರದಿಂದಲೂ ಕನ್ನಡಪರ ಸಂಟನೆಗಳ ಮುಖಂಡರು, ರೈತರು ಬೈಕ್​ ರ್ಯಾಲಿ ಮೂಲಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.
ರಾಜ್ಯ ರೈತ ಸಂದ ಉಪಾಧ್ಯ ಮಲ್ಲಯ್ಯ ಮಾತನಾಡಿ, ಬೇನಾಮಿ ಆಸ್ತಿ ಮಾರಿಕೊಳ್ಳಲು ರಾಜಕಾರಣಿಗಳು ಭೂಸ್ವಾಧಿನ ಮಾಡಿಕೊಳ್ಳುತ್ತಿದ್ದು, ಹಿರಿಯರು ನಮಗಾಗಿ ಬಿಟ್ಟು ಹೋಗಿರುವ ತುಂಡು ಭೂಮಿಯನ್ನು ಉಳಿಸಿಕೊಳ್ಳುವ ಅನಿವಾರ್ಯ ಇದೆ. ಸರ್ಕಾರ ಹೀಗೆಯೇ ಒಂದಲ್ಲ ಒಂದು ಕಡೆ ಫಲವತ್ತಾದ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳುತ್ತ ಹೋದರೆ ರೈತರು ಎಲ್ಲಿಗೆ ಹೋಗಬೇಕು? ರಸ್ತೆಗಳನ್ನು ಮುಚ್ಚಲೂ ಸರ್ಕಾರದ ಬಳಿ ಹಣ ಇಲ್ಲ. ಹೀಗಿರುವಾಗ ಯಾವ ರೀತಿ ಉಪನಗರ ಅಭಿವೃದ್ಧಿ ಮಾಡುತ್ತಾರೆ? ಬಂಡೆಗಳ ಮೇಲಿನ ಭೂಮಿಯನ್ನು ಕೊರೆದು ಸುರಂಗ ರಸ್ತೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ರೈತ ಸಂದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 3ನೇ ಹಂತದ ಕೈಗಾರಿಕಾ ವಲಯ ಮಾಡಿ ವರ್ಷಗಳು ಕಳೆದರೂ ಅಭಿವೃದ್ಧಿ ಕಂಡಿಲ್ಲ, ಮೊದಲು ಅಲ್ಲಿಗೆ ಕಾರ್ಖಾನೆಗಳು ಬರುವಂತೆ ನೋಡಿಕೊಳ್ಳಲಿ ಎಂದು ಆಗ್ರಹಿಸಿ, ರೈತರ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿ ಧ್ವನಿಯಾಗಬೇಕೆಂದು ಕರೆ ನೀಡಿದರು.
ರೈತ ಹೋರಾಟ ಹಿತರಣಾ ಸಂದ ಪದಾಧಿಕಾರಿಗಳಾದ ಪ್ರಕಾಶ್​, ಶ್ರೀನಿವಾಸ್​ ರೆಡ್ಡಿ, ಮಂಡಲಹಳ್ಳಿ ನಾಗರಾಜು, ಹೊಸೂರು ಹರೀಶ್​, ರವೀಂದ್ರ ನಾಥ ರೆಡ್ಡಿ, ಕೃಷ್ಣ, ರಾಧಾಕೃಷ್ಣ, ನಾಗೇಶ್​ ಕುಮಾರ್​, ಮಂಜುನಾಥ್​, ಹೇಮಂತ್​, ಶ್ರೀಧರ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net