20 ವರ್ಷದ ಹಿಂದೆಯೇ ಬಿಎಂಟಿಸಿ ಬಸ್ ಸೇವೆ ಕಂಡ ಗ್ರಾಮ ಇದಾಗಿದೆ. ಗ್ರಾಮದಲ್ಲಿ ಕೃಷಿ ಕುಟುಂಬಗಳೇ ಹೆಚ್ಚಿದ್ದು, ರೇಷ್ಮೆ, ಮಾವು, ತೆಂಗು, ಅಡಿಕೆ ಬೆಳೆಗಾರರಿದ್ದು, ಉಪ ಕಸುಬಾಗಿ ಹೈನುಗಾರಿಕೆ ಅವಲಂಬಿತ ಕುಟುಂಬಗಳಿವೆ. ಮಾವು ಮತ್ತು ತೆಂಗು, ಅಡಿಕೆ ತೋಟದ ಬೆಳೆ ಸೇರಿ ಕಾಕಡ ಹೂವು ಬೆಳೆಯೂ ಪ್ರಧಾನವಾಗಿದೆ. ಅರ್ಕಾವತಿ ನದಿ ರೈತರ ನೀರಿನ ಬವಣೆ ನೀಗಿಸಿದೆ.