ಎಚ್.ಎಂ.ರೇವಣ್ಣ ಅವರ ಮನೆಯ ಬಳಿಗೆ ಬೆಳಗುಂಬ ಗ್ರಾಮದ ಹಿರಿಯ ಮುಖಂಡರು ಇಡೀ ಕುಟುಂಬದವರನ್ನು ಕರೆದೊಯ್ದು ಸಂಜೆಯವರೆಗೂ ಕೂರಿಸಿಕೊಂಡು ಪ್ರತಿಭಟಿಸಿದಾಗ 2 ಲ ಮಾತ್ರ ನೀಡುತ್ತೇನೆ. ಬೇಕಾದರೆ ತೆಗೆದುಕೊಂಡು ಹೋಗಿ ಎಂದರಲ್ಲದೆ, ಸಾಯಲು ನಮ್ಮ ಕಾರೇ ಬೇಕಿತ್ತಾ, ಎಲ್ಲೆಲ್ಲೋ ಸಾಯುತ್ತಾರೆ, ಅದಕ್ಕೆಲ್ಲಾ ನಾವು ಜವಾಬ್ದಾರರಾಗಲು ಆಗುತ್ತದೆಯೇ? ನಾನು ಮೃತದೇಹವನ್ನು ಆಂಬುಲೆನ್ಸ್ನಲ್ಲಿ ಕಳುಹಿಸಲಿಲ್ಲವಾ ಎಂದು ಹೇಳಿ ಬರಿಗೈಲಿ ವಾಪಸ್ ಕಳುಹಿಸಿದ್ದಾರೆ ಹೊರತು ನಯಾ ಪೈಸೆ ನೀಡಿಲ್ಲ. ನಮ್ಮ ಅಪ್ಪ, ಅಮ್ಮನಿಗೆ ದಿಕ್ಕು ಯಾರು ಎಂದು ಪ್ರಶ್ನಿಸಿದ್ದಕ್ಕೆ ನಾನೇನು ಮಾಡಲಿ, ಅವರನ್ನು ನಾನು ನೋಡಿಕೊಳ್ಳಬೇಕಾ? ಎಂದರು. ನಮ್ಮ ಕಾರಿಗೆ ಇನ್ಷುರೆನ್ಸ್ ಇದೆ. ನ್ಯಾಯಾಲಯದಲ್ಲಿ ಮಾತನಾಡೋಣ ಹೋಗಿ, ಮಾಧ್ಯಮಕ್ಕೆ ಹೋಗಿದ್ದಕ್ಕೆ ನಮ್ಮ ಮರ್ಯಾದೆ ಹಾಳಾಗಿದೆ ಎನ್ನುವ ಅವರು ನನ್ನ ಸಹೋದರನನ್ನು ಕಳೆದುಕೊಂಡು ನಮಗೆಷ್ಟು ಬೇಸರವಾಗಿದೆ, ಒಂದು ಮನೆಯ ದೀಪ ಆರಿದೆ ಎಂಬ ಪಶ್ಚಾತ್ತಾಪ ಅವರಿಗಿಲ್ಲ ಎಂದು ಅಳಲು ತೋಡಿಕೊಂಡರು.