ಜನಸಾಮಾನ್ಯರಿಗೆ ವಂಚನೆಯಾದರೆ ಕ್ಷಮಿಸಲ್ಲ

ಕನಕಪುರ ತಾಲೂಕು ಆಡಳಿತ ಸೌಧದಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸಭಾಂಗಣವನ್ನು  ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಉದ್ಘಾಟಿಸಿದರು. ವಿಧಾನ ಪರಿಷತ್​ ಸದಸ್ಯರಾದ ಎಸ್​.ರವಿ, ಸುಧಾಮ್​ದಾಸ್​, ಕೆ.ಎಂ.ಎಫ್​ ಅಧ್ಯಕ್ಷ ಡಿ.ಕೆ.ಸುರೇಶ್​, ಜಿಲ್ಲಾಧಿಕಾರಿ ಯಶವಂತ್​ ಗುರುಕಾರ್​, ಸಿಇಒ ಅನ್ಮೋಲ್​ಜೈನ್​, ಎಸ್​.ಪಿ. ಶ್ರೀನಿವಾಸಗೌಡ ಇದ್ದರು.
ಕನಕಪುರ ತಾಲೂಕು ಆಡಳಿತ ಸೌಧದಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸಭಾಂಗಣವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಉದ್ಘಾಟಿಸಿದರು. ವಿಧಾನ ಪರಿಷತ್​ ಸದಸ್ಯರಾದ ಎಸ್​.ರವಿ, ಸುಧಾಮ್​ದಾಸ್​, ಕೆ.ಎಂ.ಎಫ್​ ಅಧ್ಯಕ್ಷ ಡಿ.ಕೆ.ಸುರೇಶ್​, ಜಿಲ್ಲಾಧಿಕಾರಿ ಯಶವಂತ್​ ಗುರುಕಾರ್​, ಸಿಇಒ ಅನ್ಮೋಲ್​ಜೈನ್​, ಎಸ್​.ಪಿ. ಶ್ರೀನಿವಾಸಗೌಡ ಇದ್ದರು.
Published on
ಕನಕಪುರ: ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಹಲವೆಡೆ ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಬೇಸಿಗೆ ಮುಗಿಯುವ ವೇಳೆಗೆ ಇದು ಗಂಭೀರ ಸ್ವರೂಪ ತಾಳುವ ಸ್ಥಿತಿಯಲ್ಲಿದೆ. ಅಧಿಕಾರಿಗಳು ಮುಂಜಾಗ್ರತರಾಗಿ ಕುಡಿಯುವ ನೀರು ಮತ್ತು ರಾಸುಗಳಿಗೆ ಮೇವು ಕಲ್ಪಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಸೂಚಿಸಿದರು.
ತಾಲೂಕು ಆಡಳಿತ ಸೌಧದಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸಭಾಂಗಣವನ್ನು ಬುಧವಾರ ಉದ್ಘಾಟಿಸಿದ ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಮಾಡಿ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳಲು ಡಿಸಿ, ಜಿಪಂ ಸಿಇಒಗೆ ಸೂಚಿಸಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಅನುದಾನ ಬಳಕೆಯಾಗಿರುವ ಬಗ್ಗೆ ಹಾಗೂ ಫಲಾನುಭವಿಗಳಿಗೆ ನೇರವಾಗಿ ಕಲ್ಪಿಸಿರುವ ಸೌಲಭ್ಯದ ಮಾಹಿತಿಯನ್ನು ಸಂಬಂಧಪಟ್ಟವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು, ಸರ್ಕಾರದ ಅನುದಾನ ಸದುಪಯೋಗವಾಗಿದೆಯೇ ಅಥವಾ ದುರುಪಯೋಗವಾಗಿದೆಯೇ ಎನ್ನುವುದನ್ನು ಪಟ್ಟಿ ಮಾಡಿ ನೀಡಬೇಕು. ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಫಲಾನುಭವಿಗಳಿಗೆ ವಂಚನೆಯಾದರೆ ಕ್ಷಮಿಸುವುದಿಲ್ಲ ಎಂದರು. ಅಧಿಕಾರಿಗಳು ಶಿಸ್ತು ಮತ್ತು ಸಮಯಪ್ರೆಯಿಂದ ಕರ್ತವ್ಯ ನಿರ್ವಹಿಸಬೇಕು, ಅಧಿಕಾರಿಗಳು ಜನರಿಗೆ ತೊಂದರೆ ನೀಡಿದರೆ, ಲಂಚ, ದಲ್ಲಾಳಿಗಳ ಹಾವಳಿ ಮತ್ತು ಕೆಲಸದಲ್ಲಿ ರ್ನಿಲಕ್ಷ$್ಯ ತೋರಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಸ್ತೆಗೆ ಭೂಮಿ ಬಿಡಿ, ಸಹಾಯ ಮಾಡ್ತೇನೆ!
ರಾಮನಗರ ಹಾಗೂ ಕೋಡಿಹಳ್ಳಿ ರಸ್ತೆಗಳ ವಿಸ್ತರಣೆಯಿಂದ ಭೂಮಿ ಕಳೆದುಕೊಳ್ಳುವವರ ಸಭೆ ನಡೆಸಿ ಭೂ ಮಾಲೀಕರಿಂದ ಮಾಹಿತಿ ಪಡೆದಿದ್ದೇನೆ. ಶ್ರೀದಲ್ಲಿಯೇ ಕೋಡಿಹಳ್ಳಿ ರಸ್ತೆ 80 ಅಡಿ ವಿಸ್ತರಣೆಯಾಗಲಿದೆ. ಭೂಸ್ವಾಧಿನ ಪ್ರಕ್ರಿಯೆಯಲ್ಲಿ ನಗರದ 4 ವಾರ್ಡ್​ಗಳು ಒಳಪಡುತ್ತವೆ. ಆ ವೇಳೆ ನಿವೇಶನ, ಬಿಲ್ಡಿಂಗ್​ ಹಾಗೂ ಹೆಂಚಿನ ಮನೆ ಸೇರಿ ಅದರ ಮೌಲ್ಯವನ್ನು ನಿಗದಿಪಡಿಸಿ ಅಡಿಗೆ 3800 ರೂ. ದೊರೆಯಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು. ರಸ್ತೆ ವಿಸ್ತರಣೆ ವೇಳೆ ತಕರಾರು ಮಾಡಬಾರದು, ಅಭಿವೃದ್ಧಿ ದೃಷ್ಟಿಯಿಂದ ಕಾನೂನಿನಲ್ಲಿ ನಾನು ಆಸ್ತಿ ಕಳೆದುಕೊಳ್ಳುವವರಿಗೆ ಕೈಲಾದ ಸಹಾಯ ಮಾಡುತ್ತೇನೆ. ನಂಬಿಕೆ ಇಟ್ಟು ಸಹಕರಿಸಬೇಕು. ಎಲ್ಲ ತಾಲೂಕು ಕೇಂದ್ರಗಳಲ್ಲಿ ಖಾಸಗಿ ಮೆಡಿಕಲ್​ ಕಾಲೇಜುಗಳನ್ನು ಮಾಡಲಾಗಿದೆ. ಕನಕಪುರ ತಾಲೂಕಿನಲ್ಲೂ 2 ಖಾಸಗಿ ಮೆಡಿಕಲ್​ ಕಾಲೇಜುಗಳು ಇದೆ, ತುಂಗಣಿ ಸಮೀಪ ಸರ್ಕಾರದಿಂದ ಮೆಡಿಕಲ್​ ಕಾಲೇಜು ನಿರ್ಮಾಣಕ್ಕೆ ಶ್ರೀವೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಗರದ ರಸ್ತೆ ವಿಸ್ತರಣೆ ಜತೆ ಔಟರ್​ ರಿಂಗ್​ ರೋಡ್​ ಮಾಡಲಾಗುವುದು ಎಂದರು.
ಬೃಹತ್​ ಸಮಾವೇಶ
ತಾಲೂಕಿನಲ್ಲಿ ಸರ್ಕಾರಿ ಯೋಜನೆ ಪಡೆದಿರುವ ಫಲನುಭವಿಗಳ ಬೃಹತ್​ ಸಮಾವೇಶ ನಡೆಸಲು ಚಿಂತಿಸಲಾಗಿದೆ. ಗ್ಯಾರಂಟಿಗಳು ಹಾಗೂ ಬಗರ್​ಹುಕುಂ ಸಾಗುವಳಿದಾರರು ಸೇರಿ ಫಲಾನುಭವಿಗಳನ್ನು ಗುರುತಿಸಿ ಸಮಾವೇಶವನ್ನು ಜಿಲ್ಲಾ ಕೇಂದ್ರ ಅಥವಾ ಕನಕಪುರದಲ್ಲಿಯೇ ಸಮಾವೇಷ ಮಾಡಲಾಗುವುದು ಎಂದರು.
ತಾಪಂ ಇಒ ಸಿ. ಅವಿನಾಶ್​, ತಹಸೀಲ್ದಾರ್​ ಎಂ.ಸಂಜಯ್​ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕೆಡಿಪಿ ಸಭೆ ಮೊಟಕು
ಬೆಂಗಳೂರು ಮಳೆ ಅವಾಂತರದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಕೂಡಲೇ ನಗರಕ್ಕೆ ತೆರಳಿ ಸ್ಥಳ ಪರಿಶೀಲಿಸಲಾಗುವುದು. ಯಾವುದೇ ಅನಾಹುತ ಆಗಬಾರದು ಎಂಬ ಉದ್ದೇಶಕ್ಕಾಗಿ ಖುದ್ದು ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ. ಕನಕಪುರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇವಲ ಐದಾರು ಇಲಾಖೆಗಳ ಮಾಹಿತಿ ಮತ್ತು ಪ್ರಗತಿಯನ್ನು ಪಡೆಯುತ್ತಿರುವ ವೇಳೆ ಬೆಂಗಳೂರು ಮಳೆ ಆವಾಂತರದ ಸುದ್ದಿ ಕೇಳಿ ಬಂತು. ಬೆಂಗಳೂರು ನಗರದ ಬೋರಿಂಗ್​ ಆಸ್ಪತ್ರೆಯ ಕಾಂಪೌಂಡ್​ ಕುಸಿದು ಬಿದ್ದು ಹಲವು ಮಂದಿ ದುರ್ಮರಣ ಹೊಂದಿದ್ದಾರೆಂಬ ಸಂದೇಶ ರವಾನೆಯಾಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತರಾತುರಿಯಲ್ಲಿ ಬೆಂಗಳೂರಿನತ್ತ ನಡೆದರು.
ಆನೆ ಹಾವಳಿ ತಡೆಗೆ ಕ್ರಮ
ಕಾಡಾನೆ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು, ಸಾಕಷ್ಟು ಕಡೆ ರೈಲ್ವೆ ಬ್ಯಾರಿಕೇಡ್​ ಕಾಮಗಾರಿಗಳಾಗಿವೆ. ಅರಣ್ಯ ಸಚಿವರಿಂದ ಕಾಮಗಾರಿ ಹಣ ನೀಡಿದ್ದಾರೆ. ಇನ್ನು 18 ಕಿ.ಮೀ ರೈಲ್ವೆ ಬ್ಯಾರಿಕೇಡ್​ ಆಗಬೇಕು, ಈ ಬಗ್ಗೆ ಅರಣ್ಯ ಸಚಿವರೊಂದಿಗೆ ಮಾತನಾಡಿ ಅನುದಾನ ಬಿಡುಗಡೆಗೊಳಿಸಿ ಹಂತ ಹಂತವಾಗಿ ಕಾಮಗಾರಿಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಇಂದು ಅರಣ್ಯ ಇಲಾಖೆಗೆ 2 ಗಸ್ತು ವಾಹನಗಳನ್ನು ವಿತರಣೆ ಮಾಡಿದ್ದೇವೆ, ೇತ್ರದಲ್ಲಿ 10ಕ್ಕೂ ಹೆಚ್ಚು ಆನೆಗಳು ಓಡಾಡುತ್ತಿವೆ ಎಂದು ಮಾಹಿತಿ ಇದೆ, ಇದನ್ನೆಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ ಎಂದು ಡಿಸಿಎಂ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net