ಕುದೂರು ಬಸ್ ನಿಲ್ದಾಣದಲ್ಲಿ ರಾತ್ರಿ ಹತ್ತಾರು ಬಸ್ಗಳು ನಿಲ್ಲುತ್ತವೆ. ಅಲ್ಲದೆ, ನಸುಕಿನಲ್ಲೆ ಸಾವಿರಾರು ರೂಪಾಯಿ ಮೌಲ್ಯದ ಹಾಲಿನ ಕ್ಯಾನ್ಗಳು, ದಿನಪತ್ರಿಕೆಗಳ ಬಂಡಲ್ಗಳು ಇಲ್ಲಿಗೆ ಬಂದು ಬೀಳುತ್ತವೆ. ಕತ್ತಲೆಯ ಸಾಮ್ರಾಜ್ಯವಾಗಿರುವ ಕಾರಣ ಇಲ್ಲಿ ಕಳ್ಳತನದ ಭೀತಿ ಎದುರಾಗಿದ್ದು, ಸುರತೆಯ ದೃಷ್ಟಿಯಿಂದ ಅಧಿಕಾರಿಗಳು ತಣವೇ ಎಚ್ಚೆತ್ತುಕೊಂಡು ಹೈಮಾಸ್ಟ್ ಹಾಗೂ ಕೆಟ್ಟಿರುವ ಬೀದಿ ದೀಪಗಳನ್ನು ಸರಿಪಡಿಸಬೇಕು ಮತ್ತು ಹಗಲಿನಲ್ಲಿ ಉರಿಯುವ ದೀಪಗಳನ್ನು ಆರಿಸಲು ವ್ಯವಸ್ಥೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.