ರೋಗಗ್ರಸ್ತ ಶ್ವಾನ ಸಂತತಿಗೆ ಕಡಿವಾಣ ಎಂದು?

ಬೀದಿನಾಯಿಗಳ ಹಾವಳಿ ಸಂಗ್ರಹ ಚಿತ್ರ.
ಬೀದಿನಾಯಿಗಳ ಹಾವಳಿ ಸಂಗ್ರಹ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಚನ್ನಪಟ್ಟಣ ನಗರಸಭೆ ವಿರುದ್ಧ ಜನಾಕ್ರೋಶ
  • ಸಂತಾನಶಕ್ತಿ ಹರಣ ಚಿಕಿತ್ಸೆ, ಆಶ್ರಯ
  • 1.40 ಕೋಟಿ ಅನುದಾನ ಮೀಸಲು

ಚನ್ನಪಟ್ಟಣ

ನಗರದಲ್ಲಿ ರೋಗಗ್ರಸ್ತ ಬೀದಿನಾಯಿಗಳ ಸಂಖ್ಯೆದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕದಲ್ಲಿ ನಗರಸಭೆ ವಿರುದ್ಧ ಜನಾಕ್ರೋಶ ಜೋರಾಗಿದೆ. ಎಂದಿನಂತೆಈ ಬಾರಿಯೂ ಶ್ವಾನಗಳ ನಿಯಂತ್ರಣಕ್ಕೆ ಬಜೆಟ್ನಲ್ಲಿ 1.40 ಕೋಟಿ ರೂ. ಮೀಸಲಿಟ್ಟಿದ್ದು, ಇನ್ನಾದರೂ ಹಾವಳಿಗೆಕಡಿವಾಣ ಬೀಳುವುದೇ ಎಂಬ ಆಶಾಭಾವ ಮೂಡಿದೆ.

ಹೌದು..., ನಗರ ಹಾಗೂ ಗ್ರಾಮಾಂತರಪ್ರದೇಶದಲ್ಲಿ ಬೀದಿನಾಯಿಗಳ ಉಪಟಳ ಇಂದು ಅಥವಾ ನೆನ್ನೆಯ ವಿಚಾರವಲ್ಲ. ನಗರ ವ್ಯಾಪ್ತಿ ಸೇರಿ ತಾಲೂಕಿನಲ್ಲಿಹಲವಾರು ವರ್ಷಗಳಿಂದ ಬೀದಿನಾಯಿಗಳ ಸಮಸ್ಯೆ ದೊಡ್ಡಮಟ್ಟದಲ್ಲಿ ತಲೆದೋರಿದೆ.

ಬೀದಿನಾಯಿಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳುಹಾಗೂ ಪಾದಚಾರಿಗಳ ಮೇಲೆ ಎರಗುವುದು ದಿನೇದಿನೆ ಹೆಚ್ಚಾಗುತ್ತಿದೆ. ಪ್ರತಿ ಬೀದಿ ಹಾಗೂ ಸಾರ್ವಜನಿಕಸ್ಥಳಗಳಲ್ಲಿ ಗುಂಪು ಗುಂಪಾಗಿ ಸೇರುವ ನಾಯಿಗಳು ಭಯದ ವಾತಾವರಣ ನಿರ್ಮಿಸುತ್ತಿವೆ. ನಗರ ಪ್ರದೇಶ ಒಂದರಲ್ಲೆಸುಮಾರು 2.5 ಸಾವಿರಕ್ಕೂ ಅಧಿಕ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆನೀಡಿ, ಸುರತವಾಗಿ ಅದೇ ಸ್ಥಳದಲ್ಲಿ ಬಿಡಲು ನಗರಸಭೆಯಿಂದ 2024ರಿಂದ ಹಲವಾರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ, ಈ ಟೆಂಡರ್ನಲ್ಲಿ ಯಾರೂ ಭಾಗವಹಿಸಿರಲಿಲ್ಲ.ಕೊನೆಗೆ ಎಬಿಸಿ (ಅನಿಮಲ್ ರ್ಬತ್ ಕಂಟ್ರೋಲ್) ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಡಾ.ಅಭಿಲಾಷ್ ಎಂಬುವವರು ಟೆಂಡರ್ ಪಡೆದುಕೊಂಡಿದ್ದಾರೆ.

ಪ್ರತಿನಾಯಿಯಸಂತಾನಶಕ್ತಿ ಹರಣ ಚಿಕಿತ್ಸೆ ಸೇರಿ ವ್ಯಾಕ್ಸಿನೇಷನ್, ಜಿಪಿಎಸ್ ಅಳವಡಿಕೆ, ಚಿಕಿತ್ಸೆ ವೇಳೆ ಆಹಾರಸೇರಿದೆ. ಇದರೊಂದಿಗೆ, ಡಾಗ್ಪೌಂಡ್ ನಿರ್ಮಾಣವೂ ಈ ಯೋಜನೆ ಒಳಗೊಂಡಿದೆ.ಇದಕ್ಕಾಗಿ 1.40 ಕೋಟಿ ರೂ.ಗಳನ್ನು ಈ ಬಾರಿಯ ಬಜೆಟ್ನಲ್ಲಿ ಮೀಸಲಿಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶನೀಡಲಾಗಿದೆ. ಆದರೆ, ಕಾರ್ಯಾಚರಣೆ ಆರಂಭಗೊಂಡಿಲ್ಲ. ಎಬಿಸಿ ಕಾರ್ಯಕ್ರಮಕ್ಕೆ ಹಲವಾರು ವರ್ಷಗಳಿಂದ ಹಣ ನಿಗದಿಯಾಗಿದ್ದರೂಯೋಜನೆ ಕಾರ್ಯಾರಂಭಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.

ರೋಗಗ್ರಸ್ತ ನಾಯಿಗಳು

ನಗರದಲ್ಲಿರೋಗಗ್ರಸ್ತ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದುನಗರವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಜೊಲ್ಲು ಸುರಿಸುವ, ಮೈ ತುಂಬಾ ಕಜ್ಜಿಯಾಗಿರುವ ನಾಯಿಗಳನ್ನು ಕಂಡುಜನತೆ ಭಯ ಪಡುವಂತಾಗಿದೆ. ಗುಂಪಿನಲ್ಲಿ ಕನಿಷ್ಠ ಒಂದಾದರೂ ರೋಗಗ್ರಸ್ತ ನಾಯಿ ಸಾಮಾನ್ಯವಾಗಿದೆ. ಇವುಗಳಿಂದಪ್ರತಿಯೊಂದು ನಾಯಿಗಳಿಗೂ ರೋಗ ಹರಡುವ ಸಾಧ್ಯತೆಯಿದ್ದು, ಇವುಗಳು ಸಾರ್ವಜನಿಕರುಅದರಲ್ಲೂ ಮಕ್ಕಳಿಗೆ ಕಡಿದರೆ ಗತಿಯೇನು? ಎಂಬ ಆತಂಕ ಮನೆ ಮಾಡಿದೆ.

ನಾಯಿ ಹಿಡಿಯಲು ಕಮಿಷನ್ ಆರೋಪ?

ಹಲವಾರು ವರ್ಷಗಳಿಂದ ಎಬಿಸಿ ಕಾರ್ಯಕ್ರಮನನೆಗುದಿಗೆ ಬಿದ್ದಿರುವುದು ಒಂದೆಡೆಯಾದರೆ, ಈ ಕಾರ್ಯಕ್ರಮ ಅನುಷ್ಠಾನಕ್ಕೆ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪವೂಇದೆ. ಮೊನ್ನೆಯಷ್ಟೇ ನಡೆದ ನಗರಸಭೆ ಬಜೆಟ್ ಸಭೆಯಲ್ಲಿ ಈ ವಿಚಾರವನ್ನು ಕೆಲ ಸದಸ್ಯರು ಪ್ರಸ್ತಾಪಿಸಿದ್ದು, ನಾಯಿ ಹಿಡಿಯುವವರ ಹತ್ತಿರಕಮಿಷನ್ ಕೇಳಿದರೆ ಯಾರು ಬರುತ್ತಾರೆ ಎಂದು ಜೆಡಿಎಸ್ ಸದಸ್ಯ ಮಂಜುನಾಥ್ ಎಂಬುವವರು ಗಂಭೀರ ಆರೋಪ ಮಾಡಿದರು.ಇದು ನಗರದಲ್ಲಿ ಸಾಕಷ್ಟು ಚರ್ಚೆಯ ಜತೆಗೆ, ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನಗರದಲ್ಲಿ ಬೀದಿನಾಯಿಗಳ ಹಾವಳಿ ಮೀತಿಮೀರಿದೆ.ರಸ್ತೆಯಲ್ಲಿ ಓಡಾಡುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಲಾ ಕಾಲೇಜುಗಳ ಬಳಿಯೂ ನಾಯಿಗಳ ಗುಂಪುಹೆಚ್ಚಾಗುತ್ತಿದೆ. ಅದರಲ್ಲೂ ರೋಗಗ್ರಸ್ತ ನಾಯಿಗಳು ಹೆಚ್ಚಾಗಿ ಕಾಣಿಸುತ್ತಿರುವುದು ಆತಂಕದ ವಿಚಾರವಾಗಿದೆ.ಈ ವಿಚಾರದಲ್ಲಿ ನಗರಸಭೆ ವೈಲ್ಯ ಎದ್ದುಕಾಣುತ್ತಿದೆ.

> ಶ್ಯಾಮ್

ನಗರದ ಚರ್ಚ್ ರಸ್ತೆ ನಿವಾಸಿ

ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ 2024ರಿಂದ ಸಾಕಷ್ಟು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ಯಾರೂ ಭಾಗವಹಿಸಿರಲಿಲ್ಲ. ಇದೀಗ, ನಾವೇ ಟೆಂಡರ್ದಾರರನ್ನು ಮನವೊಲಿಸಿ ಪ್ರಕ್ರಿಯೆ ಮುಗಿಸಿದ್ದೇವೆ. ಗುತ್ತಿಗೆ ಸಂಸ್ಥೆಗೆಕಾರ್ಯಾದೇಶ ಪ್ರತಿ ಸಹ ನೀಡಲಾಗಿದೆ. ಆದಷ್ಟೂ ಬೇಗ ಬೀದಿನಾಯಿಗಳ ನಿಯಂತ್ರಣ ಮಾಡಲಾಗುವುದು.

> ಮಹೇಂದ್ರ

ಪೌರಾಯುಕ್ತ ಚನ್ನಪಟ್ಟಣ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net