ಎಐಇಎಂಎಸ್ ಪ್ರಾಂಶುಪಾಲ ಡಾ.ಸಂತೋಷ್ ಎಂ. ಮುರನಾಳ ಮಾತನಾಡಿ, ಸಮ್ಮೇಳನದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯದವರಲ್ಲದೇ ಅಮೆರಿಕ, ನೈಜೀರಿಯಾ, ಓಮನ್, ತೈವಾನ್ ದೇಶದಿಂದಲೂ ವಿದ್ಯಾರ್ಥಿಗಳು ಬಂದು ಎಐಗೆ ಸಂಭಂದಿಸಿದಂತೆ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಒಟ್ಟಾರೆ 183 ಪ್ರಬಂಧಗಳು ಎರಡು ದಿನದಲ್ಲಿ ಮಂಡನೆಯಾಗಲಿವೆ. ಬೆಂಗಳೂರಿನ ರೇವಾ, ಪಿಇಎಸ್, ಆರ್.ವಿ. ಕಾಲೇಜು, ಬಿಎಂಎಸ್, ತುಮಕೂರಿನ ಸಿದ್ಧಾರ್ಥ ಅಕಾಡೆಮಿ ಆ್ ಹೈಯರ್ ಎಜುಕೇಷನ್, ಕಲ್ಬುರ್ಗಿಯ ಶರಣ ಬಸವ ವಿವಿ ಸೇರಿದಂದೆ ರಾಜ್ಯದ ಹಲವು ಕಾಲೇಜುಗಳು ಸಮ್ಮೇಳನದಲ್ಲಿ ಭಾಗವಹಿಸಲಿವೆ ಎಂದು ವಿವರಿಸಿದರು.