ಬುಧವಾರ ಬೆಳಗ್ಗೆ 10 ಗಂಟೆಗೆ ಸಾತನೂರು ಹೋಬಳಿ ಅಚ್ಚಲು ಗೇಟ್ಬಳಿಯ ನಿಸರ್ಗಾ ಕೆಲಸ ಮಾಡುತ್ತಿದ್ದ ಸೈಬರ್ ಸೆಂಟರ್ಗೆ ಬಂದ ಸಂಜಯ್ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಇದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ನಿಸರ್ಗಾಳ ಕತ್ತು, ಎದೆ, ಕೈ, ತಲೆ ಭಾಗದಲ್ಲಿ ಮನಬಂದಂತೆ ಇರಿದಿದ್ದಾನೆ. ಈ ವೇಳೆ ತಡೆಯಲು ಬಂದ ಅಂಗಡಿ ಮಾಲೀಕ ಶರತ್ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ಶರತ್ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂತರ ನಿಸರ್ಗಾ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಕಂಡ ಸಂಜಯ್ ಅದೇ ಚಾಕುವಿನಿಂದ ತಾನು ಇರಿದುಕೊಂಡು ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.