ಬುಧವಾರ ಬೆಳಗ್ಗೆ 10 ಗಂಟೆಗೆ ಸಾತನೂರು ಹೋಬಳಿ ಅಚ್ಚಲು ಗೇಟ್ಬಳಿಯ ನಿಸರ್ಗಾ ಕೆಲಸ ಮಾಡುತ್ತಿದ್ದ ಸೈಬರ್ ಸೆಂಟರ್ಗೆ ಬಂದ ಸಂಜಯ್ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಇದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ನಿಸರ್ಗಾಳ ಕತ್ತು, ಎದೆ, ಕೈ, ತಲೆ ಭಾಗದಲ್ಲಿ ಮನಬಂದಂತೆ ಇರಿದಿದ್ದಾನೆ. ಈ ವೇಳೆ ತಡೆಯಲು ಬಂದ ಅಂಗಡಿ ಮಾಲೀಕ ಶರತ್ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ಶರತ್ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂತರ ನಿಸರ್ಗಾ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಕಂಡ ಸಂಜಯ್ ಅದೇ ಚಾಕುವಿನಿಂದ ತಾನು ಇರಿದುಕೊಂಡು ಸ್ಥಳದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್ಗೌಡ, ನಗರ ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಅನಂತ್ರಾಮ್ ಮತ್ತು ಸಿಬ್ಬಂದಿ ನಿಸರ್ಗಾಳನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸಂಜಯ್ ಮೃತ ದೇಹವನ್ನು ಕನಕಪುರ ಸರ್ಕಾರಿ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.