ಮಾಗಡಿ:ವಿದ್ಯುತ್ ಶಾರ್ಟ್ ಸಕ್ಯೂರ್ಟ್ನಿಂದಾಗಿ ಫ್ರಿಜ್ ಸ್ಫೋಟಗೊಂಡು ಮನೆಯಲ್ಲಿದ್ದ ದ್ವಿಚಕ್ರವಾಹನ, ಪೀಠೋಪಕರಣ, ಬಟ್ಟೆ ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಕರಲಾಗಿರುವ ಟನೆ ಪಟ್ಟಣದ ಜ್ಯೋತಿನಗರ ಬಡಾವಣೆಯಲ್ಲಿ ಶುಕ್ರವಾರ ಸಂಭವಿಸಿದೆ.
ಜ್ಯೋತಿನಗರದ ನಿವಾಸಿ ಅನಿಲ್ ಕುಮಾರ್ ಎಂಬುವರ ಮನೆಯಲ್ಲಿ ಅವಡ ಸಂಭವಿಸಿದ್ದು, ಮೇಲ್ಛಾವಣಿ ಛಿದ್ರಗೊಂಡಿದೆ. ಸ್ಫೋಟಕ್ಕೆ ವಿದ್ಯುತ್ ಟ್ರಿಪ್ ಆಗಿ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಹೆಚ್ಚಿನ ದುರಂತ ತಪ್ಪಿಸಿದೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಸಾವು ನೋವು ಸಂಭವಿಸಿಲ್ಲ.
ದೇವಾಲಯಕ್ಕೆ ತೆರಳಿದ್ದ ಅನಿಲ್ಕುಮಾರ್ ದ್ವಿಚಕ್ರವಾಹನವನ್ನು ಮನೆಯ ಒಳಗಡೆ ನಿಲ್ಲಿಸಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಫ್ರಿಜ್ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಾಗ ದ್ವಿಚಕ್ರವಾಹನದಲ್ಲಿದ್ದ ಪೆಟ್ರೋಲ್ ಹಾನಿಗೆ ಕಾರಣವಾಗಿದೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳಿಯರ ನೆರವಿನಿಂದ ಬೆಂಕಿ ನಂದಿಸಿದರು. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.