ಕುದೂರು ಪಟ್ಟಣದ ಬಸ್ ನಿಲ್ದಾಣದ ಒಂದು ಬದಿಯ ಹೈಮಾಸ್ಟ್ ದೀಪ ಸುಟ್ಟು ಹೋಗಿರುವುದು.
Published on:
Copied
Follow Us
ಕುದೂರು:ಕಳೆದೊಂದು ವಾರದಿಂದ ಪಟ್ಟಣದ ಬಸ್ ನಿಲ್ದಾಣ ಬಳಿಯ ಹೈಮಾಸ್ಟ್ ದೀಪ ಉರಿಯದ ಕಾರಣ ಸುತ್ತಮುತ್ತಲಿನ ಅಂಗಡಿಕಾರರು, ನಿವಾಸಿಗಳು ಕತ್ತಲಲ್ಲಿ ಕಾಲ ಕಳೆಯುತ್ತಿದ್ದು, ದುರಸ್ತಿಗೆ ಆಗ್ರಹಿಸಿದ್ದಾರೆ.
ಬಸ್ ನಿಲ್ದಾಣ ಅಷ್ಟೇ ಅಲ್ಲದೆ ಪಟ್ಟಣದ ಮುಖ್ಯರಸ್ತೆ ಸೇರಿ ಹಲವು ಬಡಾವಣೆಗಳಲ್ಲಿ ಹೊಸದಾಗಿ ಅಳವಡಿಸಿದ ಎಲ್ಇಡಿ ಬಲ್ಬ್ಗಳು ವಾರದೊಳಗೆ ಹಾಳಾಗುತ್ತಿವೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಇಂದು, ನಾಳೆ ಎಂದು ಸಬೂಬು ಹೇಳುತ್ತಿದ್ದಾರೆಯೇ ಹೊರತು ಸಮಸ್ಯೆ ಪರಿಹರಿಸುತ್ತಿಲ್ಲ. ಜಿಲ್ಲೆಯ ಶ್ರೀಮಂತ ಗ್ರಾಪಂಗಳಲ್ಲಿ ಒಂದಾದ ಕುದೂರಿನಲ್ಲೇ ಈ ರೀತಿಯಾದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿ ರಾತ್ರಿಯಲ್ಲಿ ಹತ್ತಾರು ಬಸ್ಗಳು ಠಿಕಾಣಿ ಹಾಕಿರುತ್ತವೆ. ಜತೆಗೆ ಸಾವಿರಾರು ರೂ. ಮೌಲ್ಯದ ಹಾಲು, ಪತ್ರಿಕೆಗಳು ಬಂದಿರುತ್ತವೆ. ಸದ್ಯ ಜಾತ್ರಾ ಸಂದರ್ಭವಾದ್ದರಿಂದ ನಿತ್ಯ ಬೇರೆ ಬೇರೆ ಕಡೆಗಳಿಂದ ಜನ ಬರುತ್ತಾರೆ. ಆದ್ದರಿಂದ ಸುರತೆ ಹಾಗೂ ಕಳ್ಳತನ ತಪ್ಪಿಸುವ ನಿಟ್ಟಿನಲ್ಲಿ ಪಂಚಾಯಿತಿ ಅಧಿಕಾರಿಗಳು ಶ್ರೀವೇ ಬೀದಿದೀಪ ಹಾಗೂ ಬಸ್ ನಿಲ್ದಾಣದ ಹೈಮಾಸ್ಟ್ ದೀಪಗಳನ್ನು ದುರಸ್ತಿಗೊಳಿಸಬೇಕು. ಹಾಗೆಯೇ ಕೆಲವೆಡಎ ಹಗಲಿನಲ್ಲೂ ಉರಿಯುವ ದೀಪಗಳನ್ನು ಆರಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ವೈಟ್ ಟಾಪಿಂಗ್ (ಮುಖ್ಯ ರಸ್ತೆ)ರಸ್ತೆಯ ಬದಿಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಕಳಪೆ ಬಲ್ಬ್ಗಳನ್ನು ಬಳಸುತ್ತಿರುವುದರಿಂದ ಪದೇಪದೆ ಅವು ಹಾಳಾಗುತ್ತಿವೆ. ಇನ್ನಾದರೂ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಪಿಡಿಒ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲಿ ಎಂಬುದು ಇಲ್ಲಿನ ಜನರ ಆಗ್ರಹ.
ಬಸ್ ನಿಲ್ದಾಣದ ಒಂದು ಭಾಗದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ವಾರದಿಂದ ಬೆಳಗುತ್ತಿಲ್ಲ. ಆದರೆ ಮತ್ತೊಂದು ಬದಿಯಲ್ಲಿ ಹಗಲಿನ ವೇಳೆಯಲ್ಲಿಯೂ ಹೈಮಾಸ್ಟ್ ದೀಪ ಬೆಳಗುತ್ತಿರುವುದು ಇಲ್ಲಿನ ಆಡಳಿತ ವೈಖರಿಯನ್ನು ಪ್ರಶ್ನಿಸುವಂತಿದೆ.
"
ಕಳೆದ ವಾರದಿಂದ ಬಸ್ ನಿಲ್ದಾಣದಲ್ಲಿನ ಹೈಮಾಸ್ಟ್ ದೀಪ ಬೆಳಗುತ್ತಿಲ್ಲ. ಸ್ಥಳಿಯ ಆಡಳಿತ ನಿಷ್ಕ್ರಿಯವಾಗಿದೆ. ಹೇಳಲು, ಕೇಳಲು ಯಾರೂ ಇಲ್ಲದಂತಾಗಿದೆ.
"
ಕುದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ದೀಪ ಸುಟ್ಟು ಹೋಗಿರುವ ಬಗ್ಗೆ ವ್ಯಾಪಾರಸ್ಥರು ಮಾಹಿತಿ ನೀಡಿದ್ದು, ಶ್ರೀವೇ ಸಮಸ್ಯೆ ಬಗೆಹರಿಸಲಾಗುವುದು.