ರಾಮನಗರದಲ್ಲಿ ಬಿರುಸಾದ ಮಳೆ

ರಾಮನಗರದಲ್ಲಿ ಸತತ ಒಂದು ಗಂಟೆ ಸುರಿದ ಮಳೆಯಿಂದ ಮುಖ್ಯರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿರುವುದು.
ರಾಮನಗರದಲ್ಲಿ ಸತತ ಒಂದು ಗಂಟೆ ಸುರಿದ ಮಳೆಯಿಂದ ಮುಖ್ಯರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿರುವುದು.
Published on
ರಾಮನಗರ: ಕಳೆದ ಎರಡು ದಿನಗಳಿಂದ ಮುಂಗಾರು ಮಳೆಯಾಗುತ್ತಿದ್ದು, ಶನಿವಾರ ಸಂಜೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ರಾಮನಗರ ಜಿಲ್ಲಾ ಕೇಂದ್ರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಿರುಸಾದ ಮಳೆ ಸುರಿಯಿತು.
ಸಂಜೆ 4&30ರ ಸುಮಾರಿನಲ್ಲಿ ಕಂಡ ಮಳೆ 6 ಗಂಟೆಯಾದರೂ ಸುರಿಯುತ್ತಲೇ ಇತ್ತು. ಬಿರುಸಾದ ಮಳೆ ಸುರಿದ ಪರಿಣಾಮ ನಗರದ ರಸ್ತೆಗಳಲ್ಲಿ ಹಳ್ಳದಂತೆ ನೀರು ಹರಿಯಿತು. ಅದರಲ್ಲೂ ಹೈವೇ ಸೇರಿದಂತೆ ನಗರದ ಕೆಲ ಮಾರ್ಗಗಳಲ್ಲಿ ನದಿಯಂತೆ ನೀರು ಹರಿಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ದ್ವಿಚಕ್ರವಾಹನ ಸವಾರರು ಹಾಗೂ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ತೊಂದರೆ ಅನುಭವಿಸಿದ್ದು ಬಿಟ್ಟರೆ, ಮಳೆಯಿಂದಾಗಿ ಆದ ಅನಾಹುತದ ಬಗ್ಗೆ ಯಾವುದೇ ವರದಿಯಾಗಿಲ್ಲ.
ಬೆಳೆಗೆ ಪೂರಕ ಮಳೆ
ಜಿಲ್ಲೆಯಲ್ಲಿ ಸಾಕಷ್ಟು ರೈತರು ಮುಂಗಾರು ಪ್ರಾರಂಭಕ್ಕೂ ಮುನ್ನ ಎಳ್ಳು, ಹಲಸಂದೆ, ಜಾನುವಾರು ಮೇವಿನ ಜೋಳ, ಉದ್ದು ಬೆಳೆದಿದ್ದು, ಮಳೆ ಬೆಳೆಗಳಿಗೆ ಪೂರಕವಾಗಿದೆ.
ಪ್ರಾಣಿ ಪಗಳಿಗೆ ನೀರು
ಶುಕ್ರವಾರ ಸಂಜೆ ಮತ್ತು ಶನಿವಾರ ಬಿರುಸಾದ ಮಳೆ ಬಿದ್ದ ಪರಿಣಾಮ ಒಂದಷ್ಟು ನೀರು ಹಳ್ಳ ಕೊಳ್ಳದಲ್ಲಿ ಹರಿದಿದೆ. ಇದರಿಂದ ಗುಂಡಿಗಳಲ್ಲಿ ನೀರು ತುಂಬಿದ್ದು ಪ್ರಾಣಿ, ಪಗಳಿಗೆ ನೀರಿನ ಅಭಾವ ನೀಗಿಸಿದೆ. ಜತೆಗೆ ರೈತರು ಮುಂಗಾರು ಹಂಗಾಮಿಗೆ ಭೂಮಿ ಹದ ಮಾಡಲು ಮಳೆ ಪೂರಕವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net