ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ ಕಾರ್ಖಾನೆ ಮಾಡಲು 100 ಎಕರೆ ಜಾಗ ನೀಡಿ ಎಂದು ಕುಮಾರಸ್ವಾಮಿ ಕೇಳಿದ್ದರು. ಅವರ ಬೇಡಿಕೆಯಂತೆ ನಾವು 100 ಎಕರೆ ಜಾಗ ನೀಡಲು ಸಿದ್ಧರಾದೆವು. ಆದರೆ, ಈಗ 100 ಎಕರೆ ಸಾಲದು, 500 ಎಕರೆ ಜಾಗ ಬೇಕು ಎಂದು ಹೊಸ ರಾಗ ಹಾಡುತ್ತಿದ್ದಾರೆ. ಒಂದೇ ಬಾರಿಗೆ ಪ್ರಾಯೋಗಿಕವಾಗಿ 500 ಎಕರೆ ಜಾಗ ನೀಡಲು ಹೇಗೆ ಸಾಧ್ಯ?. ನೀಡಿರುವ 100 ಎಕರೆಯಲ್ಲೇ ಕಾರ್ಖಾನೆಯ ಕೆಲಸಗಳನ್ನು ಪ್ರಾರಂಭಿಸಲಿ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಬೇಕಾಗುವ 200 ಅಥವಾ 300 ಎಕರೆ ಜಾಗವನ್ನು ಹಂತಹಂತವಾಗಿ ನೀಡಲು ಸರ್ಕಾರ ಸಿದ್ಧವಿದೆ. ಆದರೆ, ಕೆಲಸ ಶುರು ಮಾಡುವ ಮೊದಲೇ ದೊಡ್ಡ ಮೊತ್ತದ ಜಾಗ ಕೇಳುತ್ತಿರುವುದು ಕೇವಲ ಕಾಲಹರಣದ ತಂತ್ರವಾಗಿದೆ ಎಂದು ಕಿಡಿಕಾರಿದರು.