ಬೆಳೆಗಾರರೇ, ಮಾವು ಬೆಳೆ ಸಂರಕ್ಷಿಸಿ

mango
mango
Published on
ಮಾಗಡಿ: ಮಾವು ಹೂವು ಮತ್ತು ಕಾಯಿ ಕಚ್ಚುವ ಹಂತದಲ್ಲಿ ಬೆಳೆ ಸಂರಸುಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎನ್​.ಸಂತೋಷ್​ ತಿಳಿಸಿದ್ದಾರೆ.
ತಾಲೂಕಿನಲ್ಲಿ 6,500 ಸಾವಿರ ಹೆಕ್ಟೇರ್​ ಮಾವು ಬೆಳೆ ಇದ್ದು, ಫೆಬ್ರವರಿಯಲ್ಲಿ ಮಾವು ಕಾಯಿ ಕಚ್ಚುವ ಹಂತದಲ್ಲಿದೆ. ಈ ವೇಳೆ ಕಾಯಿ ಕಚ್ಚಿರುವ ಗೊಂಚಲುಗಳು ಬೂದಿರೋಗ ಹಾಗೂ ಜಿಗಿಹುಳು, ಸ್ಕಿ$ಪ್ಟ್​ ಕೀಟಗಳ ಹಾವಳಿಯಿಂದ ಮಾವಿನ ಪೀಚುಗಳು ಉದುರುತ್ತಿದ್ದು, ಫಸಲು ಹಾನಿಯಾಗುವ ಅಪಾಯಗಳಿವೆ. ಹೀಗಾಗಿ ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳದಿದ್ದರೆ ಹಾನಿಯ ಪ್ರಮಾಣ ಹೆಚ್ಚಾಗುವ ಸಂಭವವಿದೆ.
ಈ ಸಂಬಂಧ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಂತ್ರಿಕ ಸಮಿತಿ ತಾಲೂಕಿನ ವಿವಿಧ ಮಾವಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಕಪ್ಪಾಗುವ ಶಿಲೀಂದ್ರ ರೋಗ, ಜಿಗಿ ಹುಳು, ಮತ್ತು ಡ್ರಿಪ್ಟ್​, ಕೀಟ ಸಾಕಷ್ಟು ಸಂಖ್ಯೆಯಲ್ಲಿ ಕಾಣಬರುತ್ತಿದೆ. ಪ್ರಸ್ತುತ ಈ ಕೀಟ/ರೋಗಗಳಿಗೆ ಅನುಕೂಲಕರ ವಾತಾವರಣವಿದ್ದು, ಇದನ್ನು ನಿಯಂತ್ರಿಸುವುದು ಅಗತ್ಯವಿರುತ್ತದೆ. ಆದ ಕಾರಣ ಕೆವಿಕೆ ವಿಜ್ಞಾನಿಗಳು ಮತ್ತು ತೋಟಗಾರಿಕೆ ಅಧಿಕಾರಿಗಳು ಸೂಚಿಸುವ ಕೀಟನಾಶಕ ಸಿಂಪಡಿಸುವಂತೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net