ರೋಟರಿ ಟಾಯ್ಸ್ ಸಿಟಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ತಿರಂಗ ಯಾತ್ರೆಗೆ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೇಶ್, ನ್ಯಾ.ಸುರೇಶ್, ನ್ಯಾ.ಸಂದೇಶ್, ನ್ಯಾ.ವೆಂಕಟೇಶಪ್ಪ, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ರೋಟರಿ 3191 ಝೋನಲ್ ಚೇರ್ ರೋ.ಮಲ್ಲೇಶ್ ತಿರಂಗಾಯಾತ್ರೆಗೆ ಚಾಲನೆ ನೀದ
: ರೋಟರಿ ಟಾಯ್ಸ್ ಸಿಟಿ ಸಂಸ್ಥೆಯಿಂದ ಶನಿವಾರ ಸ್ವಾತಂತ್ರ್ಯ ದಿನದ ಪ್ರಯುಕ್ತ ನಗರದಲ್ಲಿ ಸಾವಿರ ಮೀಟರ್ ಉದ್ದದ ತ್ರಿವರ್ಣ ಧ್ವಜ ಬೃಹತ್ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ನ್ಯಾಯಾಲಯದ ಆವರಣದಿಂದ ಆರಂಭವಾದ ತಿರಂಗಯಾತ್ರೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣ, ಸಾತನೂರು ವೃತ್ತ, ಡಿ.ಟಿ.ರಾಮು ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಯಿತು.
ಸನ್ ರೈಸ್ ಶಾಲೆಯ ಮಕ್ಕಳ ವೇಷಭೂಷಣ ಸಾರ್ವಜನಿಕರ ಗಮನ ಸೆಳೆಯಿತು. ಟಾಯ್ಸ್ ಸಿಟಿ ಅಧ್ಯಕ್ಷ ರೋ.ಸಂತೋಷ್ ಪಾಪಣ್ಣ, ಕಾರ್ಯದರ್ಶಿ ರೋ.ಆದರ್ಶಕುಮಾರ್, ಪದಾಧಿಕಾರಿಗಳಾದ ಬೈ ಶ್ರೀನಿವಾಸ್, ತೇಜಸ್, ನಿತಿನ್, ರಾಜೇಶ್ ಮರಿಗೌಡ, ಐಟಿಸಿ ರಘು, ಕೆ.ಟಿ.ಲಕ್ಷ್ಮಮ್ಮ, ಜಯರಾಮು, ರಾಜೇಶ್ ಅಪ್ಪಗೆರೆ, ಬಾಬು, ಅಜಯ್, ಸುಜಯ್, ಯಧುಗಿರಿಗೌಡ ಇತರರಿದ್ದರು.