ಶ್ರೀ ರಂಗನಾಥಸ್ವಾಮಿ ಕ್ಷೇತ್ರದಲ್ಲಿ ಅದ್ದೂರಿ ದೀಪೋತ್ಸವ

ಮಾಗಡಿ ಶ್ರೀ ರಂಗನಾಥ ಸ್ವಾಮಿ ದೇಗುಲದಲ್ಲಿನ ದೀಪೋತ್ಸವದಲ್ಲಿ ಹಣತೆ ಹಚ್ಚಿದ ಶಾಸಕ ಬಾಲಕೃಷ್ಣ.
ಮಾಗಡಿ ಶ್ರೀ ರಂಗನಾಥ ಸ್ವಾಮಿ ದೇಗುಲದಲ್ಲಿನ ದೀಪೋತ್ಸವದಲ್ಲಿ ಹಣತೆ ಹಚ್ಚಿದ ಶಾಸಕ ಬಾಲಕೃಷ್ಣ.
Published on
ಮಾಗಡಿ: ಇತಿಹಾಸ ಪ್ರಸಿದ್ಧ ಮಾಂಡವ್ಯ ಕ್ಷೇತ್ರ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ವಿಷ್ಣು ದೀಪೋತ್ಸವ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ದೀಪೋತ್ಸವ ಅಂಗವಾಗಿ ಮಹಾಲಕ್ಷ್ಮೀ, ಸುದರ್ಶನ ಹೋಮ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಪಶ್ಚಿಮ ವೆಂಕಟಾಚಲಪತಿ ಎಂದೇ ಕರೆಯಲ್ಪಡುವ ಶ್ರೀರಂಗನಾಥಸ್ವಾಮಿಗೆ ತೋಮಾಲೆ ಅಲಂಕಾರ, ವಜ್ರಖಚಿತ ಚಿನ್ನದ ಕಿರೀಟ ಧಾರಣೆ ಭಕ್ತರ ಗಮನ ಸೆಳೆಯಿತು. ದೇವಾಲಯದ ಮುಂಭಾಗದ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಇನ್ನು ಪಟ್ಟಣದ ಗಾಂಧಿವೃತ್ತ, ತಿರುಮಲೆ ಗೇಟ್​ನಿಂದ ದೇವಾಲಯವರೆಗೆ ಆಕರ್ಷಕ ವಿದ್ಯುತ್​ ದೀಪಾಲಂಕಾರ ಮಾಡಲಾಗಿತ್ತು. ಸಿಡಿ ಮದ್ದು ಪ್ರದರ್ಶನ, ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸಾವಿರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡು ಶ್ರದ್ಧಾಭಕ್ತಿಯಿಂದ ಹಣತೆ ಹಚ್ಚಿ ಅಂತರಾಳದ ಜ್ಯೋತಿ ಬೆಳಗಿಸಿ, ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
ಇನ್ನು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿದ್ದ ಶಾಸಕ ಎಚ್​.ಸಿ.ಬಾಲಕೃಷ್ಣ ಮಾತನಾಡಿ, ದೀಪ ಜ್ಞಾನ ಸಂಕೇತ. ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು. ಒಳಗಿರುವ ಅಜ್ಞಾನದ ಕತ್ತಲೆ ಕಳೆಯಲು ಭಗವಂತನ ದರ್ಶನ ಮಾಡಬೇಕು. ದೇವಾಲಯಗಳಲ್ಲಿ ಸಾಲು ದೀಪ ಹಚ್ಚುವ ಮೂಲಕ ನಮ್ಮೊಳಗಿನ ಅಜ್ಞಾನ, ಮೂಢನಂಭಿಕೆ ಹೊಗಲಾಡಿಸಿ ಅಂತರಂಗದ ಶುದ್ಧಿ ಮಾಡಿಕೊಂಡಾಗ ಬದುಕು ಸಾರ್ಥವಾಗುತ್ತದೆ, ಸೂರ್ಯ, ಚಂದ್ರ ನತ್ರಗಳಂತೆ ಭೂಮಿಗೆ ನಮ್ಮ ಮನಸ್ಸಿನ ದೀಪ ಹಚ್ಚೋಣ ಎಂದರು.
ಮಾಜಿ ಅಧ್ಯ ಕೆ.ಕೃಷ್ಣಮೂರ್ತಿ, ಪುರಸಭೆ ಅಧ್ಯೆ ಶಿವರುದ್ರಮ್ಮ ವಿಜಯ್​ ಕುಮಾರ್​, ಸದಸ್ಯರಾದ ಶಿವಕುಮಾರ್​, ಪ್ರಕಾಶ್​, ಕರ್ನಾಟಕ ನಮ್ಮ ನವನಿರ್ಮಾಣ ವೇದಿಕೆ ಅಧ್ಯಕ್ಷ ರಾಜಣ್ಣ, ಗುತ್ತಿಗೆದಾರ ದೇವರಾಜು, ಕುಮಾರು, ಶಿವಕುಮಾರ್​, ರವಿ, ಅರ್ಚಕ ಕಾರ್ತಿಕ ಅಯ್ಯಂಗಾರ್​ ಇದ್ದರು.
5 ಕೋಟಿ ರೂ. ಅನುದಾನ
ತಿರುಮಲೆ ದೇವಾಲಯ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ 2 ಕೋಟಿ ರೂ. ಬಿಡುಗಡೆಯಾಗಿದೆ. ಭಾನುವಾರ ದೇವಾಲಯದ ಅರ್ಚಕರ ಸಭೆ ಕರೆದು ಚರ್ಚಿಸಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ಬಾಲಕೃಷ್ಣ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net