ಗಾಂಧಿ ಕೊಂದರು ಅಂದು ಗೋಡ್ಸೆ, ಇಂದು ಬಿಜೆಪಿ

ಮಾಗಡಿ ಗಾಂಧಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಬೃಹತ್​ ಗಾಂಧಿ ಪ್ರತಿಮೆಯನ್ನು ಜಿಲ್ಲಾ ಉಸ್ತವಾರಿ ಸಚಿವ ರಾಮಲಿಂಗರೆಡ್ಡಿ ಅನಾವರಣಗೊಳಿಸಿದರು. ಶಾಸಕ ಎಚ್​.ಸಿ.ಬಾಲಕೃಷ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ ಇತರರು ಇದ್ದರು.
ಮಾಗಡಿ ಗಾಂಧಿ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಬೃಹತ್​ ಗಾಂಧಿ ಪ್ರತಿಮೆಯನ್ನು ಜಿಲ್ಲಾ ಉಸ್ತವಾರಿ ಸಚಿವ ರಾಮಲಿಂಗರೆಡ್ಡಿ ಅನಾವರಣಗೊಳಿಸಿದರು. ಶಾಸಕ ಎಚ್​.ಸಿ.ಬಾಲಕೃಷ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ ಇತರರು ಇದ್ದರು.
Published on
ಮಾಗಡಿ: ಗೋಡ್ಸೆ 6 ಬಾರಿ ಸಂಚು ರೂಪಿಸಿ 7ನೇ ಬಾರಿಗೆ ಗಾಂಧಿಯನ್ನು ಕೊಂದ. ಈಗ ಬಿಜೆಪಿಯವರು ಮತ್ತೊಮ್ಮೆ ಮಹಾತ್ಮನನ್ನು ಕೊಲೆ ಮಾಡಿದ್ದಾರೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ರಾಮಲಿಂಗರೆಡ್ಡಿ ಕಿಡಿಕಾರಿದರು.
ಪಟ್ಟಣದ ಗಾಂಧಿ ನಗರ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ 14 ಅಡಿ ಎತ್ತರದ ಗಾಂಧೀಜಿಯ ಬೃಹತ್​ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ದೇಶಕ್ಕೆ ಗಾಂಧಿ ಕೊಡುಗೆ ಎಷ್ಟಿದೆ ಎಂಬುದ ಜ್ಞಾನವಿಲ್ಲದ, ಕೃತತೆ ಇಲ್ಲದ ಬಿಜೆಪಿಯವರು ಗಾಂಧಿ ಹೆಸರು ಬದಲಾಯಿಸುವ ಮೂಲಕ ಅವರಿಗೆ ಅವಮಾನ ಮಾಡಿದ್ದಾರೆ. ಇದರಿಂದ ಕಮಲದವರ ದುರುಳತನ, ದುಷ್ಟತನದ ಬಗ್ಗೆ ಜನತೆಗೆ ಗೊತ್ತಾಗಿದೆ ಎಂದು ವಾಗ್ದಾಳಿದರಲ್ಲದೇ ಕಾಂಗ್ರೆಸ್​ಅನ್ನು ಕಟ್ಟಿ ಬೆಳೆಸಿದ ಗಾಂಧೀಜಿ ಹಾಗೂ ಇಂದಿರಾಗಾಂಧಿ ಹೆಸರು ಅಜಾಮರ ಎಂದರು.
ಶಾಸಕ ಎಚ್​.ಸಿ.ಬಾಲಕೃಷ್ಣ ಮಾತನಾಡಿ, ಪಟ್ಟಣದಲ್ಲಿ ಗಾಂಧಿ ವೃತ್ತ ನಿರ್ಮಿಸಬೇಕೆಂದು ಯೋಜನೆ ಇತ್ತು. ರಸ್ತೆ ವಿಸ್ತರಣೆ ಬಳಿಕ ಪ್ರತಿಮೆಯನ್ನು ಸ್ಥಾಪಿಸಿ ಲೋಕಾರ್ಪಣೆಗೊಳಿಸಲಾಗಿದೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಹನೀಯರ ಪ್ರತಿಮೆಗಳನ್ನು ಲೋಕಾರ್ಪಗೊಳಿಸಿ ಅವರ ತತ್ವಾದರ್ಶನಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಲಾಗುವುದು ಎಂದರು.
ತಾಲೂಕಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಂಪೇಗೌಡ ಉತ್ಸವದ ಭಾಗವಾಗಿ ಮ್ಯಾರಥಾನ್​ ಓಟ, ಸಾಮೂಹಿಕ ನೃತ್ಯ, ಪ್ರತಿಭಾವಂತರಿಗೆ, ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಎಲ್ಲರನ್ನೂ ಗೌರವಿಸಲಾಗಿದೆ. ಡಿ.26ರಂದು ಕೋಟೆ ಮೈದಾನದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, ರಂಗಕಲಾವಿದರಿಂದ ರಂಗಗೀತೆ ಗಾಯನ, ಡಿ.27ರಂದು ರಂಗೋಲಿ ಸ್ಪರ್ಧೆ, ಆದರ್ಶ ದಂಪತಿಗಳ ಸ್ಪರ್ಧೆ, 28 ಗ್ರಾಮದೇವತೆಗಳ ಉತ್ಸವ ದೇವರ ಮೆರವಣಿಗೆ, ಅಂದು ಸಂಜೆ 4 ಗಂಟೆಗೆ ಅದ್ದೂರಿಯಾಗಿ ಶ್ರೀನಿವಾಸಕಲ್ಯಾಣೋತ್ಸವ ನಡೆಸಲಾಗುವುದು. ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ತಿರುಪತಿ ಲಡ್ಡು ವಿತರಿಸಲಾಗುವುದು. ಡಿ.28ರಂದು ರೈತರಿಗೆ ಸನ್ಮಾನ, ಸಂಜೆ ಹೆಸರಾಂತ ಕಲಾವಿದರಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ ಮಾತನಾಡಿ, ದೇಶಕ್ಕೆ ಸ್ವಾತಂತ್ರ$್ಯ ತರುವಲ್ಲಿ ಪ್ರಮುಖ ನಾಯಕತ್ವ ವಹಿಸಿದ್ದ ಗಾಧೀಜಿ ಅವರು ಅಹಿಂಸಾ ಮಾರ್ಗ ಅನುಸರಿಸಿದ್ದು ವಿಶ್ವಕ್ಕೆ ಮಾದರಿ. ಇವರ ಆದರ್ಶ ತತ್ವಗಳು ಎಂದೆಂದಿಗೂ ನಮ್ಮೆಲ್ಲರಿಗೆ ಸ್ಫೂರ್ತಿ. ಬಿಜೆಪಿಯವರಿಗೆ ಗಾಂಧಿ ಹೆಸರು ಬೇಡವಾಗಿದೆ. ಅದ್ದರಿಂದ ನರೇಗಾ ಯೋಜನೆ ಹೆಸರು ಬದಲಾಯಿಸಿ ರಾಮಜೀ ಯೋಜನೆ ಇಟ್ಟುಕೊಳ್ಳುತ್ತಿದ್ದಾರೆ. ಗಾಂಧಿ ಕೊಂದ ಗೂಡ್ಸೆಯೇ ಇವರಿಗೆ ನಾಯಕರಿಬಹುದು ಎಂದು ವ್ಯಂಗ್ಯವಾಡಿದರು.
ಎಂಎಲ್ಸಿ ಎಸ್​.ರವಿ, ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಎಚ್​.ಎನ್​.ಆಶೋಕ್​, ಟಿಎಪಿಸಿಎಂಎಸ್​ ಅಧ್ಯಕ್ಷ ಶಿವಪ್ರಸಾದ್​, ನಿರ್ದೇಶಕ ಎಂ.ಆರ್​.ಮಂಜುನಾಥ್​, ಬಿಎಂಆರ್​ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಪುರಸಭಾ ಅಧ್ಯೆ ಶಿವರುದ್ರಮ್ಮ ವಿಜಯಕುಮಾರ್​, ಸದಸ್ಯರಾದ ಶಿವಕುಮಾರ್​, ರಮ್ಯಾ ನರಸಿಂಹಮೂರ್ತಿ, ಮಮತಾ ಗುರುಸ್ವಾಮಿ, ದಲಿತ ಮುಖಂಡ ಚಿಕ್ಕರಾಜು, ಕೆಇಬಿ ರಾಮಕೃಷ್ಣಯ್ಯ, ಮಹಿಳಾ ಮುಖಂಡೆ ಶೈಲಜಾ, ಮಹಾಂತೇಶ್​, ರಾಜಣ್ಣ, ಆಗ್ರೋ ಪುರುಷೋತ್ತಮ್​ ಇತರರು ಇದ್ದರು.
ಬಸ್ಸುಗಳಲ್ಲಿ ತುರ್ತು ಬಾಗಿಲು ಕಡ್ಡಾಯಕ್ಕೆ ಸೂಚನೆ
ಚಿತ್ರದುರ್ಗ ಬಳಿ ಖಾಸಗಿ ಬಸ್​ ದುರಂತದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆ ಭಾಗದ ಪೊಲೀಸ್​ ಆಯುಕ್ತರು, ಹೆಚ್ಚುವರಿ ಆಯುಕ್ತರು, ಎಸ್ಪಿಗೆ ಸೂಚಿಸಲಾಗಿದೆ. ದುರಂತಕ್ಕೀಡಾದ ಬಸ್​ನಲ್ಲಿ ಸ್ಫೋಟಕ ವಸ್ತು ಇರಬಹುದು. ಈ ಮೊದಲು ಹೈದರಾಬಾದ್​ ಬಳಿ ಇದೇ ರೀತಿ ಬೆಂಕಿ ಅವಡ ಸಂಭವಿಸಿತ್ತು. ಬಸ್​ನಲ್ಲಿ ತುರ್ತು ನಿರ್ಗಮನ ಇರದ ಕಾರಣದಿಂದಲೇ ಸಾವು&ನೋವುಗಳು ಸಂಭವಿಸಿರುವ ಸಾಧ್ಯತೆ ಇದೆ. ಹಾಗಾಗಿ ನಮ್ಮಲ್ಲಿರುವ ಸುಮಾರು 25 ಸಾವಿರ ಬಸ್ಸುಗಳಿಗೆ ತುರ್ತು ನಿರ್ಗಮನ ಬಾಗಿಲು, ಕಿಟಕಿಗಳನ್ನು ಇಡಲಾಗಿದೆ. ಖಾಸಗಿ ಬಸ್ಸುಗಳಲ್ಲಿ, ಎಸಿ, ಸ್ಲೀಪಿಂಗ್​ ಕೋಚ್​ ಬಸ್ಸುಗಳಲ್ಲಿಯೂ ತುರ್ತು ನಿರ್ಗಮನ ಬಾಗಿಲು, ಕಿಟಕಿಗಳನ್ನು ಅಳವಡಿಸಲು ಸೂಚಿಸಲಾಗಿತ್ತು. ಬಸ್ಸುಗಳಲ್ಲಿ ತುರ್ತು ನಿರ್ಗಮನಕ್ಕೆ ವ್ಯವಸ್ಥೆ ಇಲ್ಲದಿದ್ದರೆ ಎಫ್​ಸಿ ಮಾಡದಂತೆ ಆರ್​ಟಿಒಗೆ ಸೂಚಿಸಲಾಗಿದೆ. ಮೃತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net