ಊರಹಬ್ಬಕ್ಕೆ ಉತ್ಸವ ಮೂರ್ತಿ ಕೊಡಿ

ಊರಹಬ್ಬಕ್ಕೆ ಉತ್ಸವ ಮೂರ್ತಿ ನೀಡದ ಮುಜರಾಯಿ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಮಾಗಡಿ ತಾಲೂಕು ಕಚೇರಿ ಮುಂದೆ ದಲಿತ ಸಂರ್ಷ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಟನೆಗಳ ನೇತೃತ್ವದಲ್ಲಿ ಮಾಯಸಂದ್ರ ಗ್ರಾಮದ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕುಂದುಕೊರತೆ ಸಮಿತಿ ಸದಸ್ಯ ನರಸಿಂಹಮೂರ್ತಿ, ದಲಿತ ಮುಖಂಡರಾದ ವನಜಾ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಜೀವಕ ಗಂಗಹನುಮಯ್ಯ, ಕುಮಾರ್​ ಇತರರು ಇದ್ದರು.
ಊರಹಬ್ಬಕ್ಕೆ ಉತ್ಸವ ಮೂರ್ತಿ ನೀಡದ ಮುಜರಾಯಿ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಮಾಗಡಿ ತಾಲೂಕು ಕಚೇರಿ ಮುಂದೆ ದಲಿತ ಸಂರ್ಷ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಟನೆಗಳ ನೇತೃತ್ವದಲ್ಲಿ ಮಾಯಸಂದ್ರ ಗ್ರಾಮದ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕುಂದುಕೊರತೆ ಸಮಿತಿ ಸದಸ್ಯ ನರಸಿಂಹಮೂರ್ತಿ, ದಲಿತ ಮುಖಂಡರಾದ ವನಜಾ, ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ, ಜೀವಕ ಗಂಗಹನುಮಯ್ಯ, ಕುಮಾರ್​ ಇತರರು ಇದ್ದರು.
Published on
ಮಾಗಡಿ: ತಿಪ್ಪಸಂದ್ರ ಹೋಬಳಿಯ ಮಾಯಸಂದ್ರದಲ್ಲಿ ದಲಿತ ಸಮುದಾಯಕ್ಕೆ ಮುಜರಾಯಿ ಇಲಾಖೆಯು ಶ್ರೀ ಪಟ್ಟಳದಮ್ಮ ದೇವಿ (ಶ್ರೀ ಕಾಳಿಕಂಠೇಶ್ವರಿ ದೇವಿ) ಉತ್ಸವ ಮೂರ್ತಿ ನೀಡದ ಕಾರಣ ಗ್ರಾಮಸ್ಥರು ಊರ ಹಬ್ಬ ಬಹಿಷ್ಕರಿಸಿ ತಾಲೂಕು ಕಚೇರಿ ಮುಂಭಾಗ ದಲಿತ ಸಂರ್ಷ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಟನೆಗಳ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್​ ನೀಡಿದ್ದ ಲಿಖಿತ ಭರವಸೆ ಈಡೇರಿಸದೆ ದಲಿತರಿಗೆ ವಂಚಿಸಿದ್ದಾರೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯ ಸಿಗದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಅಧಿಕಾರಿಗಳ ವೈಲ್ಯ: ಮಾಯಸಂದ್ರದ ಜಾತ್ರೆಯನ್ನು ಅಸ್ಪ-----ೃಶ್ಯತೆ ಬದಿಗಿಟ್ಟು ಎಲ್ಲರೂ ಒಟ್ಟಾಗಿ ಆಚರಿಸಲು ಮಾರ್ಚ್​ 20 ಮತ್ತು 21ರ ಶಾಂತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಆ ಒಪ್ಪಂದವನ್ನು ಗಾಳಿಗೆ ತೂರಿ, ದಲಿತ ಸಮುದಾಯವನ್ನು ಸಂಪೂರ್ಣವಾಗಿ ಹೊರಗಿಟ್ಟು ಮೇಲ್ವರ್ಗದವರು ಜಾತ್ರೆ ಮುಗಿಸಿಕೊಂಡಿದ್ದರು. ಇದನ್ನು ವಿರೋಧಿಸಿ ದಲಿತರು ಪ್ರತಿಭಟನೆಗೆ ಮುಂದಾದಾಗ, ತಹಸೀಲ್ದಾರ್​ ಕೆ.ಆರ್​.ರಂಜಿತ್​ ಮಧ್ಯಪ್ರವೇಶಿಸಿ, ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಕೊಡಿಸಿ ಜು.8ರಂದು ದಲಿತರಿಗೂ ಪ್ರತ್ಯೇಕವಾಗಿ ಹಬ್ಬ ಆಚರಿಸಲು ಅವಕಾಶ ಕಲ್ಪಿಸಿಕೊಡುವುದಾಗಿ ಲಿಖಿತ ಭರವಸೆ ನೀಡಿದ್ದರು. ಪಂಚಾಯಿತಿ ಮೂಲಕ ಗ್ರಾಮದ ಪ್ರತಿ ಮನೆಗೂ ಈ ಕುರಿತು ಕರಪತ್ರಗಳನ್ನು ಹಂಚಲಾಗಿತ್ತು.
ದೇಶಕ್ಕೆ ಸ್ವಾತಂತ್ರ$್ಯ ಬಂದು ಶತಮಾನದ ಸಮೀಪದಲ್ಲಿದ್ದರೂ, ಸಮಾಜದಲ್ಲಿ ಇಂದಿಗೂ ಅಸ್ಪಶ್ಯತೆ ತಾಂಡವಾಡುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. 7 ಹಳ್ಳಿಗಳ ದೇವತೆಯಾಗಿರುವ ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಈ ತಾಲೂಕು ಕಚೇರಿಗೆ ಕನಿಷ್ಠ 20 ಬಾರಿಯಾದರೂ ಅಲೆದಾಡಿದ್ದೇವೆ. ಆದರೆ, ತಹಸೀಲ್ದಾರ್​ ಅವರು ನಮಗೆ ನಿರಂತರವಾಗಿ ಸುಳ್ಳು ಹೇಳಿ ವಂಚಿಸುತ್ತಿದ್ದಾರೆ ಎಂದು ದಲಿತ ಮುಖಂಡ ನರಸಿಂಹಮೂರ್ತಿ ಆರೋಪಿಸಿದರು.
ಪ್ರತಿಭಟನೆಯಲ್ಲಿ ದಲಿತ ಸೇನೆ ತಾಲೂಕು ಅಧ್ಯಕ್ಷ ನಾಗರಾಜು, ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾದೇವಿ, ಪ್ರಧಾನ ಅರ್ಚಕ ಸ್ವಾಮಿ, ಮಮತಾ, ಬೈಲಯ್ಯ, ನಾರಾಯಣ್​, ರಂಜಿತ, ಪವಿತ್ರಾ, ನಯನಾ, ದಿನೇಶ್​, ಸಹದೇವಯ್ಯ, ನೇತ್ರಾವತಿ, ದೊಡ್ಡಿ ಲಕ್ಷ$್ಮಣ್​ ಇದ್ದರು.
ಕೊನೆ ಕ್ಷಣದಲ್ಲಿ ಕೈಕೊಟ್ಟ ತಹಸೀಲ್ದಾರ್​!: ಅಧಿಕಾರಿಗಳ ಮಾತು ನಂಬಿದ ದಲಿತ ಸಮುದಾಯದವರು ಲಾಂತರ ರೂ. ಖರ್ಚು ಮಾಡಿ ವಾದ್ಯಗೋಷ್ಠಿ, ಆರತಿ ಹಾಗೂ ದೇವರಿಗೆ ಅಲಂಕಾರ ಮಾಡಲು ಹೂವು ಸೇರಿ ಪೂಜಾ ಸಾಮಗ್ರಿಗಳನ್ನು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಜು. 8ರ ಹಬ್ಬದ ಹಿಂದಿನ ರಾತ್ರಿ 9:30 ರ ಸುಮಾರಿಗೆ ತಹಸೀಲ್ದಾರ್​ ರಂಜಿತ್​ ಅವರು ಕರೆ ಮಾಡಿ, ಡಿಸಿ ತುರ್ತು ಸಭೆ ಇದೆ, ನಾನು ಬರಲು ಸಾಧ್ಯವಿಲ್ಲ ಎಂದು ಹೇಳಿ ದಿಢೀರನೆ ಕೈಕೊಟ್ಟಿದ್ದಾರೆ. ಇದರಿಂದಾಗಿ ದಲಿತರ ಜಾತ್ರಾ ಮಹೋತ್ಸವ ಸ್ಥಗಿತಗೊಂಡಿದ್ದು, ಇಡೀ ಸಮುದಾಯಕ್ಕೆ ತೀವ್ರ ನೋವು ಮತ್ತು ಆಘಾತವನ್ನುಂಟು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭರವಸೆ ಮೇರೆಗೆ ಪ್ರತಿಭಟನೆ ವಾಪಸ್​
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್​ ಕೆ.ಆರ್​.ರಂಜಿತ್​ ಅವರು, ಮೆರವಣಿಗೆಯ ದೇವರು ಮುಜರಾಯಿ ಇಲಾಖೆಗೆ ಸೇರಿದ್ದೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಮುಜರಾಯಿ ಇಲಾಖೆಯಿಂದ ಮಾಹಿತಿ ಪಡೆದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಭೇಟಿಗೆ ಪಟ್ಟು ಹಿಡಿದರು. ನಂತರ ತಹಸೀಲ್ದಾರ್​ ಸಮಾಜದಲ್ಲಿ ಅಸ್ಪ-----ೃಶ್ಯತೆಗೆ ಅವಕಾಶವಿಲ್ಲ, ಬುಧವಾರದ ಒಳಗಾಗಿ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಡಿಸಿ ಭೇಟಿಗೆ ಪಟ್ಟು
ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಖುದ್ದಾಗಿ ಭೇಟಿ ನೀಡಿ, ನಮಗೆ ನ್ಯಾಯ ಒದಗಿಸಬೇಕು. ದಲಿತರಿಗೆ ಉತ್ಸವ ಮೂರ್ತಿಯನ್ನು ಕೊಡಿಸಿ ಹಬ್ಬ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಬೇಕು. ಅಲ್ಲಿಯವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗೋಪಾಲ್​ ಮಾತನಾಡಿ, ಬುಧವಾರ ದೇವರು ಕೊಡಿಸುವುದಾಗಿ ಹೇಳಿ ಏಕೆ ಕೊಡಿಸಿಲ್ಲ? ಕಾನೂನು ಪ್ರಕಾರ ನೀವು ದೇವರನ್ನು ಕೊಡಿಸಬಹುದಾಗಿತ್ತು. ಹಬ್ಬ ಮಾಡುವುದಾದರೂ ಹೇಗೆ? ಇದು 17 ಗ್ರಾಮದ ದೇವರಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net