ಕಸಕ್ಕೆ ಬೆಂಕಿ ಹೆಚ್ಚುತ್ತಿದೆ ಮಾಲಿನ್ಯ

ಚನ್ನಪಟ್ಟಣ ನಗರದ ಖಾಸಗಿ ಬಸ್​ ನಿಲ್ದಾಣದ ಬಳಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು.
ಚನ್ನಪಟ್ಟಣ ನಗರದ ಖಾಸಗಿ ಬಸ್​ ನಿಲ್ದಾಣದ ಬಳಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು.
Published on
ಚನ್ನಪಟ್ಟಣ: ನಗರವನ್ನು ಪದೆಪದೇ ಕಾಡುವ ತ್ಯಾಜ್ಯ ಸಮಸ್ಯೆಯನ್ನು ಬೆಂಕಿಯ ಮೂಲಕ ಶಮನಗೊಳಿಸುವ ಪ್ರಯತ್ನ ಬೊಂಬೆನಗರಿ ಚನ್ನಪಟ್ಟಣದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಪರಿಸರ ಮಾಲಿನ್ಯ ಹೆಚ್ಚುತ್ತಿದೆ.
ಹೌದು... ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ನಗರದ ಕೆಲ ಅಂಗಡಿ ಮಾಲೀಕರು ಕಸಕ್ಕೆ ಬೆಂಕಿ ಹಾಕುವ ಪರಿಪಾಠ ರೂಢಿಸಿಕೊಂಡಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ನಗರದ ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ಹಲವೆಡೆ ಕಸಕ್ಕೆ ಬೆಂಕಿ ಹಾಕುವುದು ಜೋರಾಗಿ ನಡೆಯುತ್ತಿದೆ. ಸಂಜೆಯಾಗುತ್ತಲೇ ಸಾರ್ವಜನಿಕ ಸ್ಥಳಗಳು ಸೇರಿದಂತೆ ಹಲವೆಡೆ ಕಸಕ್ಕೆ ಬೆಂಕಿ ಹಾಕಲಾಗುತ್ತಿದೆ. ಪ್ಲಾಸ್ಟಿಕ್​ ಹಾಗೂ ಇನ್ನಿತರ ತ್ಯಾಜ್ಯಗಳ ದಹನದಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧರಿಸಿ, ಈಗಾಗಲೇ ರಾಜ್ಯ ಸರ್ಕಾರವೂ ಕಸಕ್ಕೆ ಬೆಂಕಿ ಹಚ್ಚುವುದನ್ನು ರ್ನಿಬಂಧಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಜನವಸತಿ ಪ್ರದೇಶ ಅಥವಾ ಬಯಲು ಜಾಗಗಳಲ್ಲಿ ಕಸಕ್ಕೆ ಬೆಂಕಿ ಇಡುವಂತಿಲ್ಲ. ಸರ್ಕಾರದ ಆದೇಶ ಉಲ್ಲಂಸಿ ಬೆಂಕಿ ಹಚ್ಚಿದರೆ 5 ಲ ರೂ.ವರೆಗೆ ದಂಡ ಇಲ್ಲವೇ 5 ವರ್ಷ ಜೈಲು ಮತ್ತು ದಂಡ ಪಾವತಿ ಶಿೆ ವಿಧಿಸುವ ಅವಕಾಶವಿದೆ.
ಇಂತಹ ಕಠಿಣ ಕಾನೂನು ಇದ್ದರೂ ಸಂಬಂಧಿಸಿದವರು ಇದುವರೆಗೂ ಯಾರ ಮೇಲೂ ಪ್ರಯೋಗ ಮಾಡಿಲ್ಲ. ಹೀಗಾಗಿ, ಕೆಲವರು ಕಸದ ರಾಶಿ ಕರಗಿಸಲು ಬೆಂಕಿಯನ್ನು ಅಸವಾಗಿ ಬಳಸಿಕೊಳುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ನಗರದ ಸರ್ಕಾರಿ ಬಸ್​ ನಿಲ್ದಾಣ, ಖಾಸಗಿ ಬಸ್​ ನಿಲ್ದಾಣ, ಪೊಲೀಸ್​ ಕ್ವಾರ್ರ್ಟಸ್​ ಸಮೀಪ ಹಾಗೂ ಹೆದ್ದಾರಿಯಲ್ಲಿ ಇಂತಹ ಪ್ರಕರಣ ಹೆಚ್ಚಾಗುತ್ತಿದೆ.
"

ನಗರದ ಹಲವಾರು ಕಡೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವ ಕಾರಣದಿಂದ ಸಾಕಷ್ಟು ಪರಿಸರ ಮಾಲಿನ್ಯವಾಗುತ್ತಿದೆ. ಅದರಲ್ಲೂ ಪ್ಲಾಸ್ಟಿಕಲ್​ ವಸ್ತುಗಳಿಗೆ ಬೆಂಕಿ ಹಚ್ಚುವ ಕಾರಣ ಮಾರಕರೋಗಗಳು ಬರಲಿವೆ. ಈ ವಿಚಾರವಾಗಿ ನಗರಸಭೆ ಹಾಗೂ ಕರ್ನಾಟಕ ಪರಿಸರ ನಿಯಂತ್ರಣ ಮಂಡಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು.

— > ಸಂತೋಷ್​ ತಟ್ಟೆಕೆರೆ ನಿವಾಸಿ, ಚನ್ನಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net