ಶುಕ್ರವಾರ ಬೆಳಗ್ಗೆ 6 ಗಂಟೆಗೆ ಯೋಗಾಸನ ಶಿಬಿರದ ಮೂಲಕ ಉತ್ಸವ ಪ್ರಾರಂಭಗೊಂಡಿದ್ದು, ಶಿಬಿರದಲ್ಲಿ ಮಕ್ಕಳು ಹಾಗೂ ಹಿರಿಯರು ಭಾಗವಹಿಸಿ ವಿವಿಧ ಆಸನ ಪ್ರದರ್ಶಿಸಿದರು. ಉತ್ಸವದ ಮೊದಲ ದಿನ ಯೋಗಶಿಬಿರವಲ್ಲದೆ ವಿಾನ ಮೇಳ, ವೇಷಭೂಷಣ ಸಹಿತ ರಂಗಗೀತೆಗಳ ಗಾಯನ, ವಾಯ್ಸ್ ಆ್ ಬೊಂಬೆನಾಡು, ವೇಷಭೂಷಣ ಸ್ಪರ್ಧೆ, ದಂಪತಿಗಳಿಗೆ ಭಾರತೀಯ ಸಂಪ್ರದಾಯದ ಉಡುಗೆ&ತೊಡುಗೆಯೊಡನೆ ಪ್ರದರ್ಶನ ಸ್ಪರ್ಧೆ ಹಾಗೂ ಚಲನಚಿತ್ರಗಿತೆಗಳ ಸಮೂಹ ನೃತ್ಯ ಏರ್ಪಡಿಸಲಾಗಿತ್ತು.