ಮಾಗಡಿಗೆ ಬಂದ ಗಾಂಧಿ ಬೃಹತ್​ ಪ್ರತಿಮೆ

ಮಾಗಡಿ ಗಾಂಧೀಜಿ ವೃತ್ತದಲ್ಲಿ 14 ಅಡಿ ಎತ್ತರದ ಬೃಹತ್​ ಕಂಚಿನ ಪ್ರತಿಮೆ ನಿರ್ಮಿಸಿರುವುದು.
ಮಾಗಡಿ ಗಾಂಧೀಜಿ ವೃತ್ತದಲ್ಲಿ 14 ಅಡಿ ಎತ್ತರದ ಬೃಹತ್​ ಕಂಚಿನ ಪ್ರತಿಮೆ ನಿರ್ಮಿಸಿರುವುದು.
Published on

14 ಅಡಿ ಎತ್ತರ > 1300 ಕೆಜಿ ತೂಕ > ಡಿ.25ಕ್ಕೆ ಅನಾವರಣ

ಮಾಗಡಿ: ಪರ&ವಿರೋಧದ ನಡುವೆ ಪಟ್ಟಣದಲ್ಲಿ ಗಾಂಧೀಜಿಯ ಬೃಹತ್​ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ.
ಇಲ್ಲಿನ ಗಾಂಧಿನಗರ ವೃತ್ತದಲ್ಲಿ ಮಾಜಿ ಶಾಸಕ ಎ.ಮಂಜುನಾಥ್​ ಅವರ ಅವಧಿಯಲ್ಲಿ ಅಂದರೆ 7 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದ ಪುತ್ಥಳಿಯನ್ನು ವೃತ್ತದಿಂದ&ಪಟ್ಟಣದ ಖಾಸಗಿ ಬಸ್​ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿ ಕಾರಣ 3 ತಿಂಗಳ ಹಿಂದೆ ಸ್ಥಳಾಂತರಿಸಲಾಗಿತ್ತು.
ಈವೇಳೆ ಜೆಡಿಎಸ್​ ಮುಖಂಡರು ಭಾರಿ ವಿರೋಧ ವ್ಯಕ್ತಪಡಿಸಿದ್ದರೂ ಪ್ರತಿಮೆಯನ್ನು ತೆರವುಗೊಳಿಸಿದ್ದಲ್ಲದೇ ಪ್ರತಿಭಟಿಸಿದ್ದ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದರು. ಈಗ ಅದೇ ಸ್ಥಳದಲ್ಲಿ ಗಾಂಧೀಜಿಯ 14 ಅಡಿ ಎತ್ತರ 1,300 ಕೆಜಿ ತೂಕದ ಕಂಚಿನ ಬೃಹತ್​ ಪ್ರತಿಮೆಯನ್ನು ಸೋಮವಾರ ಮಧ್ಯಾಹ್ನ ಅಳವಡಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿನ ಬೃಹತ್​ ಚಾಮುಂಡೇಶ್ವರಿ ಪ್ರತಿಮೆ ಮಾಡಿದ ಶಿಲ್ಪಿ ಜೀವನ್​ ಅವರೇ ಗಾಂಧೀಜಿ ಪ್ರತಿಮೆ ತಯಾರಿಸಿದ್ದು, ಡಿ.25ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಶಾಸಕ ಎಚ್​.ಸಿ.ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ.ಸುರೇಶ್​ ಅನಾವರಣಗೊಳಿಸಲಿದ್ದಾರೆ. ಅಂದಹಾಗೆ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಎಚ್​.ಸಿ.ಬಾಲಕೃಷ್ಣ ಅವರು ವೈಯಕ್ತಿಕವಾಗಿ 35 ಲಕ್ಷ ರೂ. ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಬೃಹತ್​ ಕಂಚಿನ ಪ್ರತಿಮೆಯನ್ನು ಗಾಂಧಿ ನಗರದ ವೃತ್ತದಲ್ಲಿ ಆಳವಡಿಸಲು ತರುತ್ತಿದ್ದಂತೆ ಸಾಕಷ್ಟು ಮಂದಿ ಕಣ್ತುಂಬಿಕೊಂಡರು.
ಟೀಕೆಗಳು ಸಾಯುತ್ತವೆ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ.. ಜೈ ಬಾಲಣ್ಣ... ಎಂಬ ಪೋಸ್ಟರ್​ಗಳನ್ನು ಕಾಂಗ್ರೆಸ್​ ಕಾರ್ಯಕರ್ತರು, ಮುಖಂಡರು ಗಾಂಧಿ ಪ್ರತಿಮೆಯ ೋಟೋಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಿದ್ದಾರೆ.
"

ವೈಯಕ್ತಿಕವಾಗಿ 35 ಲಕ್ಷ ರೂ. ವೆಚ್ಚದಲ್ಲಿ ಬೃಹತ್​ ಗಾಂಧೀಜಿ ಪ್ರತಿಮೆ ನಿರ್ಮಿಸುವುದಾಗಿ ನುಡಿದಂತೆ ನಡೆದಿದ್ದೇವೆ. ಡಿ.25ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ವಿರೋಧ ಪಕ್ಷದವರ ಕಪಟ, ನಾಟಕ ಹಾಗೂ ನಮ್ಮನ್ನು ಜನ ಹೋಲಿಕೆ ಮಾಡಲಿ, ಯಾರು ಪ್ರಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಅವರೇ ತೀರ್ಮಾನಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net