ಆರ್.ಬ್ಯಾಡರಹಳ್ಳಿಯ ಆರು ಯುವಕರು ಬೈಕ್ಗಳಲ್ಲಿ ಅತಿವೇಗವಾಗಿ ವೀಲಿಂಗ್ ಮಾಡಿಕೊಂಡು ಬರುತ್ತಿದ್ದರು. ವಿಶ್ವನಾಥಪುರ ಗೇಟ್ಗಿಂತ ಮುಂಚೆ ಕೆಂಪಸಾಗರ ಗೇಟ್ ಬಳಿ ಬೈಕ್ಗಳಲ್ಲಿ ಸಾಗುವಾಗ ಅಪಾಯಕಾರಿ ಚಾಲನೆಯನ್ನು ಕಂಡು ಸಾರ್ವಜನಿಕರು ಬೈಕ್ ತಡೆದು ಬುದ್ಧಿವಾದ ಹೇಳಿ, ಎಚ್ಚರಿಕೆ ನೀಡಿದ್ದರು. ಆದರೆ, ಸಾರ್ವಜನಿಕರ ಮಾತಿಗೆ ಕ್ಯಾರೆ ಎನ್ನದ ಯುವಕರ ಗುಂಪು ಮತ್ತಷ್ಟು ವೇಗವಾಗಿ ವೀಲಿಂಗ್ ಮಾಡಿಕೊಂಡು ಮುನ್ನುಗ್ಗಿ ವಿಶ್ವನಾಥಪುರ ಗೇಟ್ ಬಳಿ ವೆಂಕಟೇಶಪ್ಪ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.