ಹಲ್ಲೆ ಮಾಡಿದ ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕನಕಪುರ: ಹಳೆಯ ದ್ವೇಷದಿಂದ ಹುಲಿಬೆಲೆ ಗ್ರಾಮದ ಯುವಕನನ್ನು ಶನಿವಾರ ಮಾದಪ್ಪನದೊಡ್ಡಿ ಗೇಟ್​ ಬಳಿ ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪದ ಮೇಲೆ ನಾಲ್ವರನ್ನು ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ.
ಹುಲಿಬೆಲೆ ಗ್ರಾಮದ ಅರುಣ(36)ನನ್ನು ಅದೇ ಗ್ರಾಮದ ಪವನ್​, ಕಿರಣ, ದಿಲೀಪ, ಕೀರ್ತಿ ದೊಡ್ಡಾಲಹಳ್ಳಿ ರಸ್ತೆ ಮಾದಪ್ಪನದೊಡ್ಡಿ ಗೇಟ್​ ಸಮೀಪ ಅಡ್ಡಗಟ್ಟಿ, ಮುಖ ಸೇರಿದಂತೆ ಹಲವೆಡೆ ತುಳಿದು ಹಲ್ಲೆ ಹಲ್ಲೆ ಮಾಡಿದ್ದಲ್ಲದೇ, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಗಾಯಾಳುವನ್ನು ಹಾರೋಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾತನೂರು ಗ್ರಾಮಾಂತರ ಪೊಲೀಸ್​ ಠಾಣೆ ಸಬ್​ಇನ್​ಸ್ಪೆಕ್ಟರ್​ ಆಕಾಶ್​ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net