ಈ ನಾಲ್ವರು ಮಂಗಳವಾರ ಮಳವಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ, ಬುಧವಾರ ಮುಂಜಾನೆ ಸ್ವಗ್ರಾಮಕ್ಕೆ ಸಾಗಣೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನದಲ್ಲಿ ಸಾತನೂರು ವಲಯ ಅರಣ್ಯ ಅಧಿಕಾರಿ ಬಾಲಕೃಷ್ಣ, ಕಾವೇರಿ ವನ್ಯಜಿವಿ ವಿಭಾಗದ ಅಧಿಕಾರಿ ಅನಿಲ್, ಸಿಬ್ಬಂದಿ ಗೋಪಾಲ, ಹನುಮಂತ, ಸತೀಶ್ ತಂಡ ತಾಲೂಕಿನ ಗಡಿ ಭಾಗದ ಹೊನಗನಹಳ್ಳಿ ಸಮೀಪ ಆರೋಪಿಗಳನ್ನು ಬಂಧಿಸಿ, ಕಾರು, ಬೈಕ್, 2 ನಾಡ ಬಂದೂಕು ಹಾಗೂ 2 ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.