ಬೆಂಕಿಗಾಹುತಿಯಾದ ರಾಗಿಹುಲ್ಲಿನ ಮೆದೆ

ಮಾಗಡಿ ತಾಲೂಕಿನ ನಾಗಶೆಟ್ಟಹಳ್ಳಿಯ ರೈತ ರಾಜಣ್ಣ ಅವರ ರಾಗಿ ಹುಲ್ಲಿನ ಮೆದೆಗೆ ಹೊತ್ತಿ ಉರಿಯುತ್ತಿರುವುದು.
ಮಾಗಡಿ ತಾಲೂಕಿನ ನಾಗಶೆಟ್ಟಹಳ್ಳಿಯ ರೈತ ರಾಜಣ್ಣ ಅವರ ರಾಗಿ ಹುಲ್ಲಿನ ಮೆದೆಗೆ ಹೊತ್ತಿ ಉರಿಯುತ್ತಿರುವುದು.
Published on
ಮಾಗಡಿ: ತಾಲೂಕಿನ ನಾಗಶೆಟ್ಟಹಳ್ಳಿಯಲ್ಲಿ ರಾಜಣ್ಣ ಅವರ ರಾಗಿ ಹುಲ್ಲಿನ ಮೆದೆ ಬೆಂಕಿಗೆ ಆಹುತಿಯಾಗಿದೆ.
ಸುಮಾರು 5 ಎಕರೆಯಲ್ಲಿ ರಾಗಿ ಬೆಳೆ ಉತ್ತಮವಾಗಿ ಬೆಳೆದು ಅಪಾರ ಪ್ರಮಾಣದ ರಾಗಿ ಹುಲ್ಲು ಸಂಗ್ರಹವಾಗಿತ್ತು. ಆದರೆ, ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅಪಾರ ಪ್ರಮಾಣದ ಮೇವು ಸುಟ್ಟು ಬೂದಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net