ನರಸಿಂಹಯ್ಯ ಅವರು ಪಾಲು ಪದ್ಧತಿಯಲ್ಲಿ ರಾಗಿ ಬೆಳೆದಿದ್ದರು. ಇತ್ತೀಚೆಗಷ್ಟೇ ರಾಗಿ ಒಕ್ಕಣೆ ಮುಗಿಸಿ, ಕಾಳನ್ನು ಬೇರ್ಪಡಿಸಿ, ಜಾನುವಾರುಗಳಿಗೆ ಮೇವಿಗಾಗಿ ಎರಡು ಬೃಹತ್ ರಾಗಿ ಮೆದೆಗಳನ್ನು ಹಾಕಿದ್ದರು. ಆದರೆ, ಬೆಂಕಿ ತಗುಲಿದ್ದರಿಂದ ಮೆದೆ ಸಂಪೂರ್ಣ ಸುಟ್ಟಿದೆ. ಗಾಳಿಯ ವೇಗ ಹೆಚ್ಚಾಗಿದ್ದರಿಂದ ಸ್ಥಳಿಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಪ್ರಯೋಜನವಾಗಿಲ್ಲ.