ಸೈಯದ್ ಜಿಲಾನ್ ಎಂಬುವವರ ಕಾರ್ ಗ್ಯಾರೇಜ್ ಹಾಗೂ ಇರ್ಫಾನ್ ಅವರ ಕುಶನ್ ಅಂಗಡಿಗೆ ಭಾನುವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಗ್ಯಾರೇಜ್ನಲ್ಲಿ ಡೆಲಿವರಿಗೆ ಸಿದ್ಧವಾಗಿದ್ದ ಟಾಟಾ ಸುಮೋ ಸೇರಿದಂತೆ ಇತರ ವಸ್ತುಗಳು ಹಾಗೂ ಕುಶನ್ ಅಂಗಡಿಯಲ್ಲೂ ಸಾವಿರಾರು ಮೌಲ್ಯದ ಸೀಟುಗಳು, ಮಿಷನರಿಗಳು ಸುಟ್ಟು ಭಸ್ಮವಾಗಿವೆ. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.