ಚನ್ನಪಟ್ಟಣ:ನಾಡಪ್ರಭು ಕೆಂಪೇಗೌಡರ ್ಲೆಕ್ಸ್ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದನ್ನು ಖಂಡಿಸಿ ದೇವರಹಳ್ಳಿಯಲ್ಲಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.
ಗ್ರಾಮದಲ್ಲಿ ಭಾನುವಾರ ಕೆಂಪೇಗೌಡರ ಜಯಂತಿ ಆಚರಿಸಲು ಕೆಂಪೇಗೌಡರ ಬೃಹತ್ ಬ್ಯಾನರ್ ಅಳವಡಿಸಲಾಗಿತ್ತು. ಈ ಬ್ಯಾನರ್ಗೆ ಭಾನುವಾರ ಮಧ್ಯರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಈ ವಿಚಾರ ವಿವಾದಕ್ಕೆ ಹೋಗುವುದನ್ನು ಅರಿತ ಪೊಲೀಸರು ಕೂಡಲೇ ಗ್ರಾಮಕ್ಕೆ ಭೇಟಿನೀಡಿ, ಬೆಂಕಿಯಿಂದ ಅರ್ಧ ಬೆಂದ ಬ್ಯಾನರ್ ತೆರವುಗೊಳಿಸಲು ಮುಂದಾದರು. ಆದರೆ, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮಹನೀಯರಿಗೆ ಅವಮಾನವಾಗಿದೆ, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ, ಶಿೆಕೊಡಬೇಕೆಂದು ಪಟ್ಟು ಹಿಡಿದರು. ಕೊನೆಗೂ ಸುಟ್ಟ ಬ್ಯಾನರ್ ಅನ್ನು ಪೊಲೀಸರು ತೆಗೆಸಿದರು.
ಈ ವಿಚಾರ ತಿಳಿಯುತ್ತಲೇ ಗ್ರಾಮಕ್ಕೆ ಪಾತೀತವಾಗಿ ಆಗಮಿಸಿದ ಒಕ್ಕಲಿಗ ಸಮಾಜ ಮುಖಂಡರು ಸ್ಥಳದಲ್ಲಿಯೇ ಶಾಮಿಯಾನ ಹಾಕಿ ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆಗೆ ಒಕ್ಕಲಿಗರ ಸಂದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ ಸೇರಿ ಸಂದ ಒಕ್ಕಲಿಗರ ಸಂದ ಎಂಪ್ಲಾಯ್ ಅಸೋಸಿಯೇಷನ್ ಸದಸ್ಯರು ಸಾಥ್ ನೀಡಿದರು. ಈ ಕೃತ್ಯ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಅವರಿಗೆ ಕಠಿಣ ಶಿೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಇದೊಂದು ಬಹಳ ಸ್ಮೂದ ವಿಚಾರ. ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ, ಹೋರಾಟದ ದಿಕ್ಕು ತೀವ್ರ ಸ್ವರೂಪ ಪಡೆಯುತ್ತದೆ ಎಂದು ಮುಖಂಡರು ಎಚ್ಚರಿಸಿದರು.
್ಲೆಕ್ಸ್ಗೆ ಬೆಂಕಿಯಿಟ್ಟ ಸ್ಥಳದಲ್ಲಿಯೇ ಕೆಂಪೇಗೌಡರ ಪ್ರತಿಮೆಗೆ ತಾಪಂ ಇಒ ಸಂದೀಪ್, ಡಿವೈಎಸ್ಪಿ ಗಿರೀಶ್ ಸಮ್ಮುಖದಲ್ಲಿಯೇ ಭೂಮಿಪೂಜೆ ಮಾಡಿದ ಮುಖಂಡರು, ಕೂಡಲೇ ಆರೋಪಿಗಳನ್ನು ತಣವೇ ಬಂಧಿಸಬೇಕು. ತಿಂಗಳಲ್ಲಿ ಈ ಜಾಗದಲ್ಲಿ ಶಾಶ್ವತ ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂದು ೂಷಿಸಿದರು. ಜತೆಗೆ, ತಾತ್ಕಾಲಿಕವಾಗಿ ಕೆಂಪೇಗೌಡರ ಕಟೌಟ್ ನಿಲ್ಲಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಮುನ್ನೆಚ್ಚರಿಕೆಯಿಂದ ಬೆಳಗ್ಗೆಯಿಂದಲೇ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನಾಕಾರರನ್ನು ಮನವೊಲಿಸಿದ ಡಿವೈಎಸ್ಪಿ ಕೆ.ಸಿ.ಗಿರಿ, ಸಿಪಿಐ ಪ್ರಕಾಶ್, ಪಿಎಸ್ಐಗಳಾದ ಸಹನಾ ಪಾಟೀಲ್, ಮನೋಹರ ಸೇರಿ ತಾಪಂ ಇಒ ಸಂದೀಪ್, ಇಂತಹ ಟನೆಯನ್ನು ಇಲಾಖೆ ಸಹ ಸಹಿಸಲು ಸಾಧ್ಯವಿಲ್ಲ. ಕಿಡಿಗೇಡಿಗಳನ್ನು ಮೂರು ದಿನದೊಳಗೆ ಬಂಧಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ಹೋರಾಟ ಕೈಬಿಡಲಾಯಿತು. ಎಂ ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.