ಮಹಿಳೆಗೆ ವಂಚಿಸಿದ ಮೂವರ ವಿರುದ್ಧ ಎ್​ಐಆರ್​

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಿಡದಿ: ಪಟ್ಟಣದ ಕೇತಗಾನಹಳ್ಳಿಯಲ್ಲಿ ಮನೆ ಮೇಲೆ ಪಡೆದಿದ್ದ ಸಾಲವನ್ನು ಪಾವತಿಸುವುದಾಗಿ ನಂಬಿಸಿ ಬಳಿಕ ಮನೆ ಮಾರಾಟ ಮಾಡಿ ಮಹಿಳೆಗೆ ವಂಚಿಸಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇತಗಾನಹಳ್ಳಿ ನಿವಾಸಿ ಛಾಯಾದೇವಿ ಅವರು 86.50 ಲಕ್ಷ ರೂ.ಗೆ ರಾಮನಗರ ತಾಲೂಕಿನ ಬಸವನಪುರ ನಿವಾಸಿ ಸುಮಂತ್​ ಬಳಿ ಮನೆ ಖರೀದಿಸಿದ್ದರು. ಆ ಮನೆ ಮೇಲೆ ೈನಾನ್ಸ್​ನಲ್ಲಿ 30 ಲ ರೂ. ಮನೆ ಸಾಲ ಇತ್ತು. ಸಾಲ ಕ್ಲೀಯರ್​ ಮಾಡಿ ಎನ್​ಒಸಿ ಕೊಡುವುದಾಗಿ ಸುಮಂತ್​ ಛಾಯಾದೇವಿಗೆ ಹೇಳಿದ್ದ. ಅಂತೆಯೇ ಬ್ಯಾಂಕ್​ ಮ್ಯಾನೇಜರ್​ ರಾಕೇಶ್​ ಅವರಿಗೆ ಕರೆ ಮಾಡಿ, ಬಳಿಕ 45 ದಿನಗಳಲ್ಲಿ ಲೋನ್​ ಕ್ಲೀಯರ್​ ಲೇಟರ್​ ಕೊಡಿಸುವುದಾಗಿ ತಿಳಿಸಿದ್ದ. ಆದರೆ 8 ತಿಂಗಳಾದರೂ ಲೋನ್​ ಕ್ಲೀಯರನ್ಸ್​ ಲೆಟರ್​ ಬಂದಿರಲಿಲ್ಲ.
ಈ ಮಧ್ಯೆ ಲೋನ್​ ರಿಕವರಿ ಮಾಡುವವರು ಮನೆ ಬಳಿ ಬಂದು ಲೋನ್​ ಕಟ್ಟದಿದ್ದರೆ ಮನೆ ಮೇಲೆ ಸಾಲ ಇದೆ ಎಂದು ಬರೆಯುತ್ತೇವೆ ಎಂದು ಛಾಯಾದೇವಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಗಾಬರಿಗೊಂಡ ಛಾಯಾದೇವಿ, ಸುಮಂತ್​ಗೆ ಕರೆ ಮಾಡಿದಾಗ ೋನ್​ ಸ್ವಿಚ್ಡ್​ ಆ್​ ಆಗಿತ್ತು. ಆತನ ಪತ್ನಿ ಅಕ್ಷತಾಗೆ ಕರೆ ಮಾಡಿದರೆ ನನಗೂ ಇದಕ್ಕೂ ಸಂಬಂಧ ಇಲ್ಲ ಎಂದಿದ್ದರು. ಇನ್ನು ಬ್ಯಾಂಕ್​ ಮ್ಯಾನೇಜರ್​ ರಾಕೇಶ್​ ಕೂಡ, ಯಾವುದೇ ಸಂಬಂಧ ಇಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಛಾಯಾದೇವಿ ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರ ವಿರುದ್ಧವೂ ಎ್​ಐಆರ್​ ದಾಖಲಿಸಲು ಆದೇಶ ನೀಡಿದೆ. ಕೋರ್ಟ್​ ಆದೇಶದಂತೆ ಬಿಡದಿ ಪೊಲೀಸ್​ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net