ದಲಿತರ ಸಮಸ್ಯೆಗೆ ಪರಿಹಾರ ಕಲ್ಪಿಸಿ

ಚನ್ಬಪಟ್ಟಣ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ  ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ತಹಸೀಲ್ದಾರ್​ ಬಿ.ಎನ್​.ಗಿರೀಶ್​, ತಾಪಂ ಇಒ ಸಂದೀಪ್​, ಸಮಾಜ ಕಲ್ಯಾಣಾಧಿಕಾರಿ ಸರೋಜಮ್ಮ, ಸಿಪಿಐಗಳಾದ ರವಿಕಿರಣ್​, ಪ್ರಕಾಶ್​ ಇದ್ದರು.
ಚನ್ಬಪಟ್ಟಣ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ತಹಸೀಲ್ದಾರ್​ ಬಿ.ಎನ್​.ಗಿರೀಶ್​, ತಾಪಂ ಇಒ ಸಂದೀಪ್​, ಸಮಾಜ ಕಲ್ಯಾಣಾಧಿಕಾರಿ ಸರೋಜಮ್ಮ, ಸಿಪಿಐಗಳಾದ ರವಿಕಿರಣ್​, ಪ್ರಕಾಶ್​ ಇದ್ದರು.
Published on
ಚನ್ನಪಟ್ಟಣ: ಇಲ್ಲಿನ ತಾಪಂ ಸಭಾಂಗಣದಲ್ಲಿ ಶನಿವಾರ ತಹಸೀಲ್ದಾರ್​ ಬಿ.ಎನ್​.ಗಿರೀಶ್​ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಸಮುದಾಯದ ಮುಖಂಡರು ಹಲವಾರು ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು.
ದಲಿತರ ಸ್ಮಶಾನ, ಸಾಗುವಳಿ ಚೀಟಿ, ಅಸ್ಪ-----ೃಶ್ಯತೆ, ನಿವೇಶನ, ಮನೆ, ಅಂಬೇಡ್ಕರ್​ ಭವನಗಳ ವಿಚಾರ ಸೇರಿ ಹಲವಾರು ಸಮಸ್ಯೆಗಳು ಅನಾವರಣಗೊಂಡವು. ಇದರೊಂದಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳಲ್ಲಿ ನಡೆಯುತ್ತಿರುವ ಮದ್ಯ ಅಕ್ರಮಮಾರಾಟದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಸಮುದಾಯದ ಮುಖಂಡರು ಹಾಗೂ ವಿವಿಧ ಗ್ರಾಮಗಳ ಜನತೆ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ನಿವೇದಿಸಿಕೊಂಡರು.
ಸ್ವಾತಂತ್ರ$್ಯ ಬಂದು ಇಷ್ಟು ವರ್ಷವಾದರೂ ದಲಿತರ ಬದುಕು ಅಮಾನವೀಯವಾಗಿದೆ. ಇಡೀ ತಾಲೂಕಿನ ಹಲವಾರು ಕಾಲನಿಗಳಲ್ಲಿ ಕಿಷ್ಕೆಂದೆ ಜಾಗದಲ್ಲಿ ದಲಿತರು ವಾಸಿಸುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 5 ಎಕರೆ ಜಮೀನು ಖರೀದಿಸಿ ನಿವೇಶನ, ಸಮುದಾಯದ ಯುವಕರಿಗೆ ಉದ್ಯೋಗ, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್​ ಭವನ ಸೇರಿದಂತೆ ಗ್ರಾಮೀಣ ಪ್ರದೇಶದ ಭವನಗಳ ಕಾಮಗಾರಿಯನ್ನು ಶ್ರೀವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಪಂ ಮಾಜಿ ಸದಸ್ಯನ ಮೇಲೆ ತಹಸೀಲ್ದಾರ್​ ಗರಂ!: ಸಭೆ ಮಧ್ಯದಲ್ಲಿ ತಹಸೀಲ್ದಾರ್​ ಗಿರೀಶ್​ ತಾಪಂ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಮತ್ತೀಕೆರೆ ಹನುಮಂತಯ್ಯ ವಿರುದ್ಧ ಗರಂ ಆದರು. ತಹಸೀಲ್ದಾರ್​ ಕುಂದುಕೊರತೆ ಆಲಿಸುವ ಮಧ್ಯೆ ಮಾತನಾಡಿದ ಮತ್ತೀಕೆರೆ ಹನುಮಂತಯ್ಯ, ಇತ್ತೀಚೆಗೆ ತಾಲೂಕು ಕಚೇರಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಗರಂ ಆದ ತಹಸೀಲ್ದಾರ್​, ಇಂತಹ ವಿಚಾರಕ್ಕೆ ಉತ್ತರ ಬೇಕಾದರೆ ನನ್ನ ಕಚೇರಿಗೆ ಬನ್ನಿ. ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸುವಾಗ ಅನಗತ್ಯ ವಿಚಾರ ಏಕೆ? ಸಭೆ ಉತ್ತಮವಾಗಿ ನಡೆಯುತ್ತಿದೆ, ನಿಮ್ಮಂಥವರು ಹುಳಿ ಹಿಂಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತರ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಮಸ್ಯೆಗಳನ್ನು ಆಲಿಸಿದ ತಹಸೀಲ್ದಾರ್​ ಬಿ.ಎನ್​.ಗಿರೀಶ್​, ಮುಂದಿನ್​ 6 ತಿಂಗಳ ಒಳಗೆ ಸ್ಮಶಾನ ಸಮಸ್ಯೆ ಪರಿಹರಿಸಲಾಗುವುದು. ಇದರೊಂದಿಗೆ, ಉಳಿದ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಸಮುದಾಯದ ಮುಖಂಡರಾದ ಪಟ್ಲು ಗೋವಿಂದರಾಜು, ಮತ್ತೀಕೆರೆ ಹನುಮಂತಯ್ಯ, ಕೋಟೆ ಸಿದ್ಧರಾಮು, ಕೆಂಗಲಮೂರ್ತಿ, ಕೂಡ್ಲೂರು ಸಿದ್ದರಾಮು, ನೀಲಕಂಠನಹಳ್ಳಿ ಭರತ್​, ಶಿವಾನಂದ್​, ಕುಮಾರ್​ ಇದ್ದರು.
ಸತ್ತಾಗಲೂ ನಮಗೆ ಜಾಗವಿಲ್ಲ!
ತಾಲೂಕಿನ ಅನೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಗಳಿಲ್ಲ. ಸತ್ತಾಗ ನೆಮ್ಮದಿಯಾಗಿ ಹೂಳಲು ಆರು ಅಡಿ ಜಾಗ ಇಲ್ಲದಿರುವುದು ದುರಂತ. ಹಲವಾರು ಗ್ರಾಮಗಳ ಗ್ರಾಮಸ್ಥರು ಶವಗಳನ್ನೇ ತಂದು ತಾಲೂಕು ಕಚೇರಿ ಮುಂಭಾಗವಿಟ್ಟು ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಹತ್ತಾರು ಗ್ರಾಮಗಳಲ್ಲಿ ಇಂದಿಗೂ ಸಶ್ಮಾನವಿಲ್ಲ. ಇದ್ದರೂ ಒತ್ತುವರಿಯಾಗಿವೆ ಎಂದು ಅಂಕಿಅಂಶಗಳ ಸಮೇತ ದಲಿತ ಮುಖಂಡರು ತಹಸೀಲ್ದಾರ್​ ಗಮನಕ್ಕೆ ತಂದರು.
ಮುಂಜಾನೆಯೇ ಎಣ್ಣೆ!
ಸಮುದಾಯದ ಬಹುತೇಕರು ಕೂಲಿಯನ್ನೇ ನೆಚ್ಚಿಕೊಂಡಿದ್ದಾರೆ. ಆದರೂ ಕೂಲಿಯ ಬಹುತೇಕ ಹಣವನ್ನು ಮದ್ಯಕ್ಕೆ ಹಾಕುತ್ತಿದ್ದಾರೆ. ಹಳ್ಳಿಗಳ ಗೂಡಂಗಡಿ ಹಾಗೂ ಕಿರಾಣಿ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಮುಂಜಾನೇ ಟೀ ಕುಡಿಯುವ ಸಮಯಕ್ಕೆ ಮದ್ಯಸೇವಿಸಿ ಜನ ಹಾಳಾಗುತ್ತಿದ್ದಾರೆ. ಇದರೊಂದಿಗೆ, ನಿಗದಿತ ಸಮಯಕ್ಕಿಂತ ಮೊದಲೇ ಬಾರ್​ಗಳು ವ್ಯಾಪಾರ ಶುರು ಮಾಡುತ್ತಿವೆ. ಇದರ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
"

ತಾಲೂಕು ಕಚೇರಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿರುವುದು ವಿಧಿ&28 (1)ರ ಉಲ್ಲಂನೆ. ಸರ್ಕಾರಿ ಅಧಿಕಾರಿ ಧಾರ್ಮಿಕ ಆಚರಣೆ ಸಂವಿಧಾನದ ಆತ್ಮ ಮತ್ತು ವಿಧಾನದ ಉಲ್ಲಂನೆಯೂ ಆಗಿದೆ. ಇದಕ್ಕೆ ಕುಂದು ಕೊರತೆ ಸಭೆಯಲ್ಲಿ ಉತ್ತರ ಕೇಳಿದರೆ ತಹಸೀಲ್ದಾರ್​ ದರ್ಪ ತೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net