ಕಂದಾಯ ಅಧಿಕಾರಿ ಹಡಗಲಿ ಹೊನ್ನಪ್ಪ, ಗ್ರಾಮ ಸಹಾಯಕ ಭರತ್ ಗಾಯಗೊಂಡವರು. ಚನ್ನಿಗಪ್ಪನ ಪಾಳ್ಯದ ಸರ್ಕಾರಿ ಓಣಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ 3 ತಿಂಗಳ ಹಿಂದೆ ವೀರಾಪುರ ಗ್ರಾಮಸ್ಥರೆಲ್ಲರೂ ಒಟ್ಟಾಗಿ ತಹಸೀಲ್ದಾರ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಆದೇಶದಂತೆ, ಮಂಗಳವಾರ ಮಧ್ಯಾಹ್ನ ತಾಲೂಕು ಸರ್ವೇಯರ್ ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿ ಹಡಗಲಿ ಹೊನ್ನಪ್ಪ ಹಾಗೂ ಗ್ರಾಮ ಸಹಾಯಕ ಭರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು.