ಕೇಬಲ್​ ಕಳ್ಳನನ್ನು ಹಿಡಿದ ರೈತರು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಾಗಡಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಪಂಪ್​ಸೆಟ್​ಗಳ ಕೇಬಲ್​ ಕಳ್ಳತನ ಮಾಡುತ್ತಿದ್ದ ದಂಡಿನಪಾಳ್ಯದ ಚಂದ್ರು (38) ಎಂಬಾತನನ್ನು ಸೋಮವಾರ ತಡರಾತ್ರಿ ಕದ್ದ ಮಾಲು ಸಮೇತ ಹಿಡಿದ ರೈತರು, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೆಲ ದಿನಗಳಿಂದ ತಾಲೂಕಿನ ಚಕ್ರಬಾವಿ, ಕೋರಮಂಗಲ, ಮರಳು&ದೇವನಪುರ, ಪೂಜಾರಿಪಾಳ್ಯ, ಕೊಟ್ಟಗಾರಹಳ್ಳಿ, ದಂಡಿಗೆಪುರ ಹಾಗೂ ಮತ್ತಿಕೆರೆ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ಸರಣಿ ಕೇಬಲ್​ ಕಳ್ಳತನ ಪ್ರಕರಣಗಳು ಜರುಗಿದ್ದವು. ರಾತ್ರಿ ವೇಳೆ ಬೋರ್​ವೆಲ್​ಗಳ ತಾಮ್ರದ ಕೇಬಲ್​ ಕತ್ತರಿಸಿ ಪರಾರಿಯಾಗುತ್ತಿದ್ದ ಕಳ್ಳನಿಗಾಗಿ ರೈತರು ನಿಗಾ ವಹಿಸಿದ್ದರು.
ಸೋಮವಾರ ರಾತ್ರಿ 2ರ ಸುಮಾರಿನಲ್ಲಿ ರಾಮನಗರ ಮುಖ್ಯರಸ್ತೆಯ ಕೊಟ್ಟಗಾರಹಳ್ಳಿ ಬಳಿ ಆರೋಪಿ ಚಂದ್ರು ಕೇಬಲ್​ ಕಳವು ಮಾಡುತ್ತಿರುವುದನ್ನು ರೈತರು ಗಮನಿಸಿದ್ದಾರೆ. ತಣ ಆತನನ್ನು ಬೆನ್ನಟ್ಟಿ, ಕದ್ದ ಮಾಲಿನೊಂದಿಗೆ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net