ಹಸು ಬಾಯಿ ಛಿದ್ರಗೊಂಡ ಸುದ್ದಿ ಕೇಳಿ ರೈತನಿಗೆ ಹೃದಯಾಘಾತ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಕನಕಪುರ: ತಾಲೂಕಿನ ಸೋಮೇದ್ಯಾಪನಹಳ್ಳಿಯಲ್ಲಿ ಸೋಮವಾರ ನಾಡಬಾಂಬ್​ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿದ್ದು, ಸುದ್ದಿ ತಿಳಿದ ಮಾಲೀಕನಿಗೆ ಹೃದಯಾಘಾತವಾಗಿದೆ.
ಸೋಮೇದ್ಯಾಪನಹಳ್ಳಿಯ ಕಾಡಲಿಂಗೇಗೌಡ ಅವರ ಹಸುವನ್ನು ಸಂಬಂಧಿ ಶಿವಣ್ಣ ಅವರು ಸೋಮವಾರ ಮೇಯಿಸಲು ಊರಿನ ಹೊರಭಾಗಕ್ಕೆ ಕರೆದೊಯ್ದಿದ್ದರು. ಸಂಜೆ ಮನೆಗೆ ವಾಪಸಾಗುವಾಗ ಕಾಡುಹಂದಿ ಬೇಟೆಗೆಂದು ಇಟ್ಟಿದ್ದ ನಾಡಬಾಂಬ್​ಗೆ ಹಸು ಬಾಯಿ ಹಾಕಿದ್ದು, ಬಾಂಬ್​ ಸ್ಫೋಟಗೊಂಡು ಬಾಯಿ ಛಿದ್ರಗೊಂಡಿದೆ. ಹಸು ತುಂಬು ಫಲಕ್ಕೆ ಬಂದಿತ್ತು. ಇಂದೋ, ನಾಳೆಯೋ ಕರುವಿಗೆ ಜನ್ಮ ನೀಡಬೇಕಿತ್ತು.
ಸುದ್ದಿ ತಿಳಿದ ಹಸುವಿನ ಮಾಲೀಕ ಕಾಳಲಿಂಗೇಗೌಡ ಅವರಿಗೆ ಮನೆಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತವಾಗಿದ್ದು, ಬೆಂಗಳೂರು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಹಾಯಕ ಸಬ್​ ಇನ್​ಸ್ಪೆಕ್ಟರ್​ ರುದ್ರಪ್ಪ ಮತ್ತು ಸಿಬ್ಬಂದಿ ಪರಿಶೀಲಿಸಿದರು.
"

ಇತ್ತೀಚೆಗೆ ತಾಲೂಕಿನಲ್ಲಿ ಕಾಡುಪ್ರಾಣಿಗಳ ಬೇಟೆಗಾಗಿ ನಾಡಬಾಂಬ್​ ಬಳಸುವುದು ಹೆಚ್ಚಾಗಿದೆ. ಜಾನುವಾರುಗಳು ಕಾಡಂಚಿನ ಬಯಲು ಪ್ರದೇಶಗಳಲ್ಲಿ ಮೇವು ಅರಸಿ ಹೋದಾಗ ಇಂತಹ ಅವಡಗಳು ಸಂಭವಿಸುತ್ತಿವೆ. ಮುರುಕಣಿ, ಬಸವನಹಳ್ಳಿ, ಅರಳಕಟ್ಟೆದೊಡ್ಡಿ, ಸೋಮೇದ್ಯಾಪನಹಳ್ಳಿ ಗ್ರಾಮಗಳಲ್ಲಿ ನಾಡಬಾಂಬ್​ ಬಳಸುವ ಮಾಹಿತಿ ಇದೆ. ಇವುಗಳನ್ನು ನಿಯಂತ್ರಿಸಲು ಅರಣ್ಯ, ಪೊಲೀಸ್​ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net