ಪೊಲೀಸರ ಎದುರೇ ವಿಷ ಕುಡಿದ ರೈತ!

ಬೆಳೆ ಕಟಾವಿಗೆ ಅವಕಾಶ ನೀಡುವಂತೆ ರೈತ ಮುಖಂಡರಾದ ಜಗದಾಪುರ ರಾಮೇಗೌಡ, ವಿರುಪಾಪುರ ರಮೇಶ್​, ಕೋದಂಡರಾಮು, ಕೃಷ್ಣ ಹಾಗೂ ವಿವಾದಿತ ಜಮೀನಿನಲ್ಲಿ ಭತ್ತ ಹಾಕಿರುವ ರೈತರು ಪ್ರತಿಭಟಿಸಿದರು.
ಬೆಳೆ ಕಟಾವಿಗೆ ಅವಕಾಶ ನೀಡುವಂತೆ ರೈತ ಮುಖಂಡರಾದ ಜಗದಾಪುರ ರಾಮೇಗೌಡ, ವಿರುಪಾಪುರ ರಮೇಶ್​, ಕೋದಂಡರಾಮು, ಕೃಷ್ಣ ಹಾಗೂ ವಿವಾದಿತ ಜಮೀನಿನಲ್ಲಿ ಭತ್ತ ಹಾಕಿರುವ ರೈತರು ಪ್ರತಿಭಟಿಸಿದರು.
Published on

ಭತ್ತ ಕಟಾವಿಗೆ ಅವಕಾಶ ನೀಡಲಿಲ್ಲವೆಂದು ಆತ್ಮಹತ್ಯೆಗೆ ಯತ್ನ

ಚನ್ನಪಟ್ಟಣ: ಜಮೀನು ವಿವಾದದ ಹಿನ್ನೆಲೆಯಲ್ಲಿ ಬೆಳೆ ಕಟಾವಿಗೆ ಅವಕಾಶ ನೀಡಲಿಲ್ಲ ಎಂಬ ಅಸಮಾಧಾನದಲ್ಲಿ ರೈತರೊಬ್ಬರು ಶುಕ್ರವಾರ ಮಂಗಳವಾರಪೇಟೆ ಬಳಿ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾರೆ.
ಮಂಗಳವಾರಪೇಟೆಯ ರೈತ ವಿಶ್ವನಾಥ್​ (45) ಆತ್ಮಹತ್ಯೆಗೆ ಯತ್ನಿಸಿದವರು.
ಏನಿದು ಪ್ರಕರಣ?
ಮಂಗಳವಾರಪೇಟೆಯ ಗದ್ದೆ ಬಯಲಿನಲ್ಲಿ ಹಲವರು ಭತ್ತ ಬೆಳೆದಿದ್ದರು. ಈ ಪೈಕಿ ವಿಶ್ವನಾಥ್​ ಸಹ ಒಂದು ಎಕರೆಯಲ್ಲಿ ಬೆಳೆದಿದ್ದರು. ಆದರೆ, ಕೆಲ ದಿನಗಳಿಂದ ಈ ಜಮೀನುಗಳ ಮೇಲೆ ವಿವಾದ ಆರಂಭವಾಗಿದ್ದು, ಜಮೀನು ನನಗೆ ಸೇರಿದ್ದು ಎಂದು ಮಂಗಳವಾರಪೇಟೆಯ ಸಿದ್ದೇಗೌಡ ಎಂಬುವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಇತ್ಯರ್ಥವಾಗಿಲ್ಲ.
ಈ ನಡುವೆಯೂ ವಿವಾದಿತ ಜಮೀನಿನಲ್ಲಿನ ಭತ್ತದ ಕಟಾವಿಗೆ ಶುಕ್ರವಾರ ಬೆಳಗ್ಗೆ ಕಾರ್ಮಿಕರೊಂದಿಗೆ ವಿಶ್ವನಾಥ್​ ಗದ್ದೆಗೆ ಆಗಮಿಸಿದ್ದ. ಇದೇ ವೇಳೆ ಸಿದ್ದೇಗೌಡ ಬೆಂಬಲಿಗರೂ ಸ್ಥಳಕ್ಕೆ ಬಂದು ಭತ್ತದ ಕೊಯ್ಲಿಗೆ ವಿರೋಧಿಸಿದ್ದಾರೆ. ಇದರಿಂದ ಎರಡು ಗುಂಪಿನ ನಡುವೆ ಗಲಾಟೆ ಶುರುವಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಇಬ್ಬರ ನಡುವೆ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ಇದಕ್ಕೆ ಇಬ್ಬರೂ ಒಪ್ಪಿಲ್ಲ. ಈ ನಡುವೆಯೂ ವಿಶ್ವನಾಥ್​ ಭತ್ತದ ಕಟಾವಿಗೆ ಮುಂದಾಗಿದ್ದು, ಅವಕಾಶ ಸಿಗದಿದ್ದರಿಂದ ಪೊಲೀಸರ ಎದುರಿಗೆ ವಿಷ ಸೇವಿಸಿದ್ದಾರೆ.
ವಿಶ್ವನಾಥ್​ ಅವರನ್ನು ಸ್ಥಳಿಯರ ಸಹಾಯದಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಕಳುಹಿಸಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರೈತ ಮುಖಂಡರಾದ ಜಗದಾಪುರ ರಾಮೇಗೌಡ, ವಿರುಪಾಪುರ ರಮೇಶ್​, ಕೋದಂಡರಾಮು,
ಕೃಷ್ಣ ಹಾಗೂ ವಿವಾದಿತ ಜಮೀನಿನಲ್ಲಿ ಭತ್ತ ಹಾಕಿರುವ ರೈತರು ಸ್ಥಳದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net