ದೇಗುಲ ಮಠದ ಸ್ಮಶಾನದಲ್ಲಿ ಸೌಲಭ್ಯ ಮರೀಚಿಕೆ

ರುದ್ರಭೂಮಿಯಲ್ಲಿ ಜೇನು ಕಟ್ಟಿರುವುದ
ರುದ್ರಭೂಮಿಯಲ್ಲಿ ಜೇನು ಕಟ್ಟಿರುವುದ
Published on
ಕನಕಪುರ: ನಗರದಲ್ಲಿ ದೇಗುಲ ಮಠದ ಸ್ಮಶಾನ ಮೂಲಸೌಲಭ್ಯದಿಂದ ವಂಚಿತವಾಗಿದೆ.
ಅಂತ್ಯಸಂಸ್ಕಾರ ಮಾಡಲು ಪ್ರತಿಯೊಂದು ಪಟ್ಟಣ, ಗ್ರಾಮಗಳಲ್ಲಿ ಸ್ಮಶಾನ ಗುರುತಿಸಿ ಸೌಲಭ್ಯ ಕಲ್ಪಿಸಬೇಕೆಂದು ಹೈಕೋರ್ಟ್​ ಆದೇಶವಿದ್ದರೂ ನಗರದ ದೇಗುಲ, ಮಠದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಪರದಾಡುವಂತಾಗಿದೆ.
ಬಹಳ ವರ್ಷಗಳಿಂದ ಸ್ಮಶಾನ ಒತ್ತುವರಿಯಾಗಿದ್ದರೂ ಇರುವ ಜಾಗದಲ್ಲಿಯೇ ನೆಮ್ಮದಿಯಿಂದ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗದ ಸ್ಥಿತಿ ಇದೆ. ಸ್ಮಶಾನಕ್ಕೆ ಸಮರ್ಪಕವಾದ ದಾರಿ, ಜನರಿಗೆ ನೀರು, ನೆರಳು, ಇಲ್ಲ.
ಇತ್ತೀಚೆಗೆ ಮೃತರೊಬ್ಬರ ಶವಸಂಸ್ಕಾರದ ಸ್ಥಳದಲ್ಲಿ ಜೇನು ಕಟ್ಟಿರುವುದರಿಂದ ಜೇನುಹುಳುಗಳ ಕಾಟಕ್ಕೆ ಕೆಲವರು ದೂರದಲ್ಲೇ ಉಳಿದರು. ಇನ್ನೂ ಕೆಲವರು ಆತಂಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ಹರಸಾಹಸಪಟ್ಟರು.
ಭೂಮಿ, ವಸತಿ, ಮೂಲಸೌಕರ್ಯಗಳು ಬೇಕೆಂದು ಒತ್ತಾಯಿಸುವುದು ಸಹಜ. ಆದರೆ ಮೃತಪಟ್ಟಾಗಲೂ ಶವಸಂಸ್ಕಾರಕ್ಕೆ ಪರದಾಡುವುದು ವಿಪರ್ಯಾಸ. ಸ್ಮಶಾನದಲ್ಲಿ ಇರುವ ಜೇನುಗೂಡನ್ನು ಅರಣ್ಯ ಇಲಾಖೆ ತೆರವುಗೊಳಿಸಬೇಕು. ಸಂಬಂಧಿತ ಇಲಾಖೆಯವರು ಸ್ಮಶಾನಕ್ಕೆ ಮೂಲಸಕೌರ್ಯ ಕಲ್ಪಿಸಬೇಕು ನಾಗರಿಕರು ಒತ್ತಾಯಿಸಿದ್ದಾರೆ.
"

ನಗರದ ದೇಗುಲ ಮಠದ ಸ್ಮಶಾನ ಮೂಲಸೌಕರ್ಯವಿಲ್ಲದೆ ಶೋಚನೀಯ ಸ್ಥಿತಿಯಲ್ಲಿದೆ. ಮನುಷ್ಯನ ಹಲವು ಅಗತ್ಯಗಳಲ್ಲಿ ಸ್ಮಶಾನವೂ ಒಂದಾಗಿರುವುದರಿಂದ ಅಂತ್ಯಕ್ರಿಯೆಗೆ ಉತ್ತಮ ವಾತಾವರಣ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ನಗರಸಭೆ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಿ.

"

ಸ್ಥಳ ಪರಿಶೀಲಿಸಿ ರಸ್ತೆ, ನೀರು ಕೊಡಲು ನಾವು ಬದ್ಧರಿದ್ದೇವೆ. ಜೇನುಹುಳುಗಳ ಕಾಟವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿಸಲಾಗುವುದು.

"

ಕಳೆದ ವರ್ಷ ಸರ್ಕಾರದ ವಿಶೇಷ ಅನುದಾನದಡಿ 30 ಲಕ್ಷ ರೂ. ಬಿಡುಗಡೆಯಾಗಿತ್ತು. ಆ ಅನುದಾನದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಅನುದಾನದ ಕೊರತೆಯಿಂದ ಉಳಿದ ಕಾಮಗಾರಿ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ನಾವು ಸರ್ಕಾರಕ್ಕೆ ವಿಶೇಷ ಅನುದಾನಕ್ಕೆ ಮನವಿ ಮಾಡಿದ್ದೇವೆ. ಬರುವ ಅನುದಾನದಲ್ಲಿ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಮೂಲಸೌಕರ್ಯ ಕಲ್ಪಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net