ಅಂಡರ್​ಪಾಸ್​ ವಿಸ್ತರಣೆ ಮಾಡಿ ಜನರಿಗೆ ತೊಂದರೆ ತಪ್ಪಿಸಿ

ಬಿಡದಿಯಲ್ಲಿ ಸುಸಜ್ಜಿತ ಬಸ್​ ತಂಗುದಾಣ ನಿರ್ಮಾಣ ಮಾಡಲು  ಸಂಸದ ಡಾ.ಸಿ.ಎನ್​.ಮಂಜುನಾಥ್​ ಸ್ಥಳ ಪರಿಶೀಲನೆ ನಡೆಸಿದರು.
ಬಿಡದಿಯಲ್ಲಿ ಸುಸಜ್ಜಿತ ಬಸ್​ ತಂಗುದಾಣ ನಿರ್ಮಾಣ ಮಾಡಲು ಸಂಸದ ಡಾ.ಸಿ.ಎನ್​.ಮಂಜುನಾಥ್​ ಸ್ಥಳ ಪರಿಶೀಲನೆ ನಡೆಸಿದರು.
Published on
ಬಿಡದಿ: ಶೇಷಗಿರಿಹಳ್ಳಿ ಜನರಿಗೆ ತೀವ್ರ ತಲೆನೋವಾಗಿದ್ದ ಅವೈಜ್ಞಾನಿಕ ಅಂಡರ್​ಪಾಸ್​ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ೇತ್ರದ ಸಂಸದ ಡಾ.ಸಿ.ಎನ್​.ಮಂಜುನಾಥ್​ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಡರ್​ಪಾಸ್​ಅನ್ನು ವಿಸ್ತರಣೆ ಮಾಡುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಶೇಷಗಿರಿಹಳ್ಳಿ ಗ್ರಾಮಸ್ಥರ ಮನವಿ ಮೇರೆಗೆ ಮಂಗಳವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜನತೆ ಭೇಟಿ ನೀಡಿ ಪರಿಶೀಲಿಸಿ, ಹಳ್ಳಿಯ ಜನರಿಗೆ ಅನುಕೂಲವಾಗುವಂತೆ ಮಾಡಬೇಕಾದ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿ, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ತಾಕೀತು ಮಾಡಿದರು. ಬೆಂಗಳೂರು ಕಡೆಗೆ ಇರುವ ಸರ್ವಿಸ್​ ರಸ್ತೆ ಕಡಿದಾಗಿದ್ದು, ್ಲೆ$ಓವರ್​ ನಿರ್ಮಾಣ ಮಾಡಿ ಅದರ ಕೆಳಗೆ ಅಂಡರ್​ ಪಾಸ್​ ನಿರ್ಮಾಣ ಮಾಡಬೇಕು. ಮತ್ತೊಂದು ಕಡೆ ಖಾಸಗಿ ವ್ಯಕ್ತಿಗಳ ಭೂಮಿ ಸ್ವಾಧಿನಪಡಿಸಿಕೊಂಡು ಅಂಡರ್​ ಪಾಸ್​ ವಿಸ್ತಾರ ಮಾಡುವಂತೆ ಸಲಹೆ ನೀಡಿದರು.
ಶೇಷಗಿರಿಹಳ್ಳಿ ಬಳಿ ಹೆದ್ದಾರಿ ನಿರ್ಮಾಣ ವೇಳೆ ನಿರ್ಮಿಸಿದ್ದ ಅಂಡರ್​ ಪಾಸ್​ ಅವೈಾನಿಕವಾಗಿದ್ದರಿಂದ ಒಂದು ಕಡೆ ಓಪನ್​ ಮಾಡದೆ ಹಾಗೆ ಬಿಟ್ಟಿದ್ದರು. ಇದರಿಂದ ಗ್ರಾಮದ ಜನರು ಹೆದ್ದಾರಿ ದಾಟಲು ಕಿಲೋಮೀಟರ್​ ಗಟ್ಟಲೆ ಸುತ್ತಿ ಬಳಸಿ ಬರಬೇಕಾಗಿತ್ತು.
ಈ ಸಂಬಂಧ ಹಲವು ಬಾರಿ ಅಂಡರ್​ ಪಾಸ್​ ನಿರ್ಮಾಣಕ್ಕೆ ಒತ್ತಾಯಿಸಿ ಸ್ಥಳಿಯರು ಪ್ರತಿಭಟನೆ ನಡೆಸಿದ್ದರು. ಸಂಸದರಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಥಳಿಯರು, ಹೆದ್ದಾರಿ ದಾಟಲು ಸೂಕ್ತ ವ್ಯವಸ್ಥೆ ಇಲ್ಲ. ಸುತ್ತಿ ಬಳಸಿ ಬರಬೇಕಾಗಿದೆ. ಹಾಗಾಗಿ ಹೆದ್ದಾರಿಯಲ್ಲಿ ಬಸ್ಸುಗಳಿಗೆ ಹತ್ತಲು ಮತ್ತೊಂದು ಕಡೆಗೆ ಹೋಗುವ ಸಮಯದಲ್ಲಿ ಅಪಘಾತ ಸಂಭವಿಸಿ ಸಾವು ನೋವುಗಳು ಉಂಟಾಗುತ್ತವೆ. ಹಾಗಾಗಿ ನಮಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.
ಎರಡು ಕಡೆ ಸ್ಥಳ ಪರಿಶೀಲನೆ ಮಾಡಿದ ನಂತರ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್​ ಗಳನ್ನು ಸ್ಥಳಕ್ಕೆ ಕೆರೆಸಿ ಎರಡು ಕಡೆ ತಂಗುದಾಣ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದುಕೊಳ್ಳುವಂತೆ ತಾಕೀತು ಮಾಡಿದರು. ಈ ವೇಳೆ ಸ್ಥಳದಲ್ಲಿದ್ದ ಮಾಜಿ ಶಾಸಕ ಎ.ಮಂಜುನಾಥ್​ ನೀವು ಪ್ರಸ್ತಾವನೆ ಸಲ್ಲಿಕೆ ಮಾಡಿ, ಅನುಮತಿ ಪಡೆದುಕೊಳ್ಳಲಿ. ಟೊಯೋಟಾ ಸಂಸ್ಥೆಯವರಿಗೆ ಹೇಳಿ ಸಿಎಸ್​ಅರ್​ ನಿಧಿಯಿಂದ ಬಸ್​ ತಂಗುದಾಣ ನಿರ್ಮಾಣ ಮಾಡಿಸಬಹುದೆಂದು ಸಂಸದರಿಗೆ ಸಲಹೆ ನೀಡಿದರು. ಇದೇ ವೇಳೆ ಡಾ.ಸಿ.ಎನ್​.ಮಂಜುನಾಥ್​ ಅವರು ಸಂದರ ನಿಧಿಯಿಂದ 12 ಲ ರೂ. ಕೊಡುತ್ತೇನೆ. ಉಳಿದಂತೆ ಪುರಸಭೆ ನಿಧಿ, ಸಿಎಸ್​ಆರ್​ ನಿಧಿಯಿಂದ ನಿರ್ಮಾಣ ಮಾಡೋಣ ಎಂದರು.
ಚೌಕಿ ಮಠದ ಮುಂದೆ ಮೈಸೂರು ಕಡೆಗೆ ತಂಗುದಾಣ ನಿರ್ಮಾಣ ಮಾಡಲು ಸೂಕ್ತ ಜಾಗ ಇದ್ದು ಒಮ್ಮೆಲೇ 4&5 ಬಸ್ಸುಗಳು ಬರಲು ಅವಕಾಶ ಮಾಡಿಕೊಡಬಹುದು. ಹಾಗೆಯೇ ಬಿಜಿಎಸ್​ ವೃತ್ತದಲ್ಲಿ ಯಾವುದೇ ಸಂಚಾರ ದಟ್ಟಣೆ ಆಗುವುದಿಲ್ಲ. ಅದೇ ರೀತಿ ಬೆಂಗಳೂರು ಕಡೆಗೆ ಪೊಲೀಸ್​ ಠಾಣೆ ಪಕ್ಕದಲ್ಲಿ ಹೆದ್ದಾರಿಗೆ ಸೇರಿದ ಜಾಗ ಸಾಕಷ್ಟಿದೆ. ಅಲ್ಲಿಯೂ ಸುಸಜ್ಜಿತ ಬಸ್​ ತಂಗುದಾಣ ನಿರ್ಮಾಣ ಮಾಡಿದರೆ ಸಂಚಾರಿ ಸಮಸ್ಯೆಗೆ ಬ್ರೇಕ್​ ಹಾಕಬಹುದು ಎಂದು ಮುಖಂಡರಾದ ಮುತ್ತಣ್ಣ ಹಾಗೂ ರವಿಕುಮಾರ್​ ವಿವರಿಸಿದರು.
ಈ ವೇಳೆ ಮಾಜಿ ಶಾಸಕ ಎ.ಮಂಜುನಾಥ್​, ಪುರಸಭೆ ಅಧ್ಯೆ ಭಾನುಪ್ರಿಯಾ, ಉಪಾಧ್ಯೆ ಆಯಿಷಾ ಖಲೀಲ್​, ಸ್ಥಾಯಿ ಸಮಿತಿ ಅಧ್ಯ ದೇವರಾಜು, ಮಂಚನಾಯಕನಹಳ್ಳಿ ಗ್ರಾಪಂ ಅಧ್ಯೆ ಪವಿತ್ರಾ, ಮುಖಂಡರಾದ ಶೇಷಪ್ಪ, ಸೋಮಣ್ಣ, ಪ್ರಸಾದ್​ ಗೌಡ, ಶೇಷಗಿರಿಹಳ್ಳಿ ನರಸಿಂಹಮೂರ್ತಿ, ಮಂಜುನಾಥ್​, ಶಿವಣ್ಣ, ಪೊಲೀಸ್​ ರಾಮಣ್ಣ, ಇಟ್ಟಮಡು ಗೋಪಾಲ್​, ಡಾ.ಭರತ್​ ಕೆಂಪಣ್ಣ, ಸೋಮೇಗೌಡ ಸೇರಿದಂತೆ ಹಲವರು ಇದ್ದರು.
ಸ್ಥಳ ಪರಿಶೀಲನೆ
ಬಿಡದಿ ಪಟ್ಟಣದಲ್ಲಿ ಬೆಂಗಳೂರು ಹಾಗೂ ಮೈಸೂರು ಕಡೆಗೆ ತೆರಳುವವರಿಗೆ ಸಾರಿಗೆ ಬಸ್​ಗಳ ನಿಲುಗಡೆ ಜಾಗ ಕಿರಿದಾಗಿದೆ. ಪ್ರಯಾಣಿಕರು ನಿಂತ್ತಕೊಳ್ಳಲು ಸೂಕ್ತ ಜಾಗ ಇಲ್ಲದ್ದರಿಂದ ಸಂಸದ ಡಾ.ಸಿ.ಎನ್​.ಮಂಜುನಾಥ್​ ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ಸಾಮಾಜಿಕ ಹೋರಾಟಗಾರರಾದ ಮುತ್ತಣ್ಣ ಹಾಗೂ ರವಿಕುಮಾರ್​ ಎರಡು ಕಡೆ ಸುಸಜ್ಜಿತ ಬಸ್​ ನಿಲ್ದಾಣ ಮಾಡಲು ನಾವೇ ಖಾಸಗಿಯಾಗಿ ಜಾಗ ಹಾಗೂ ಯೋಜನೆ ಸಿದ್ಧಪಡಿಸುರುವುದಾಗಿ ಸಂಸದರ ಗಮನಕ್ಕೆ ತಂದು ನೀಲಿ ನೆ ತೋರಿಸಿ ಜಾಗದ ವಿವರಣೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net