

ಪ್ರಮುಖ ಮುಖ್ಯಾಂಶಗಳು
ಕೈಲಾಂಚ
ರಾಮನಗರದರೇವಣಸಿದ್ದೇಶ್ವರ ಬೆಟ್ಟ ಪ್ರಾಚೀನ ಇತಿಹಾಸಹೊಂದಿದ ಕ್ಷೇತ್ರವಾಗಿದೆ ಎಂದು ಉಜ್ಜಯಿನಿ ಸದ್ಧರ್ಮಪೀಠದ ಶ್ರೀಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ರಾಮನಗರತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿಲಿಂ. ಬಸವಲಿಂಗರಾಜ ಸ್ವಾಮೀಜಿಯವರ ಪ್ರಥಮ ವರ್ಷದ ಸಂಸ್ಮರಣೋತ್ಸವಅಂಗವಾಗಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆಯಲ್ಲಿ ಆಶೀರ್ವಚನ ನೀಡಿದರು.
ಜಗದ್ಗುರುರೇವಣಸಿದ್ದರು 7ನೇ ಶತಮಾನದಲ್ಲಿ ಬಂದುತಪಸ್ಸು ಮಾಡಿದ ಪುಣ್ಯಕ್ಷೇತ್ರ. ಒಂದುಕಾಡು ಗುಡ್ಡ, ಬೆಟ್ಟವಾಗಿರುವ ಸ್ಥಳಕ್ಕೆಒಬ್ಬ ಜಗದ್ಗುರುಗಳು ದಯಮಾಡಿಸಿ ಇಲ್ಲಿ ನೆಲೆಸಿ ತಪಸ್ಸುಮಾಡಿ ಇಷ್ಟಲಿಂಗ ಪೂಜೆ ಮಾಡಿದ್ದರಿಂದ ಪವಿತ್ರಕ್ಷೇತ್ರವಾಗಿದೆ. ಅವರ ಕಾಲಾವಧಿಯ 14 ಶತಮಾನಗಳನಂತರವೂ ಅವರ ಸ್ಮರಣೆಯಾಗುತ್ತಿದೆ ಅಂದರೆಜಗದ್ಗುರು ರೇವಣಸಿದ್ದರು ಎಂಥ ಮಹಿಮಾ ಶಾಲಿಗಳಾಗಿದ್ದರು,ಪವಾಡ ಪುರುಷರಾಗಿದ್ದರು, ಇಷ್ಟಲಿಂಗ ಪೂಜೆಯಲ್ಲಿ ತಮ್ಮನ್ನು ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದ್ದರು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದರು.