ಜಾನಪದ ಲೋಕದಿಂದ ಕಲಾವಿದರಿಗೆ ಪ್ರೋತ್ಸಾಹ

ರಾಮನಗರದ ಪಟ ಕುಣಿತ ಕಲಾವಿದ ಕಾಡಪ್ಪ ಅವರನ್ನು ಜಾನಪದ ಪರಿಷತ್‌ನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಅಭಿನಂದಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯಾ ನಂಜರಾಜ್ ಮುಂತಾದವರು ಇದ್ದರು.
ರಾಮನಗರದ ಪಟ ಕುಣಿತ ಕಲಾವಿದ ಕಾಡಪ್ಪ ಅವರನ್ನು ಜಾನಪದ ಪರಿಷತ್‌ನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಅಭಿನಂದಿಸಿದರು. ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯಾ ನಂಜರಾಜ್ ಮುಂತಾದವರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾನಪದ ಲೋಕದಲ್ಲಿ ತಿಂಗಳ ಅತಿಥಿ
  • ಪಟ ಕುಣಿತ ಕಲಾವಿಧ ಕಾಡಪ್ಪ ಅವರೊಂದಿಗೆ ಸಂವಾಧ

ರಾಮನಗರ

ಪಟ ಕುಣಿತವು ಗ್ರಾಮ ದೇವತೆಗಳ ಹಬ್ಬದ ಆಚರಣೆಯ ಮೂಲಕ ಸಂಪ್ರದಾಯ ರೂಪದಲ್ಲಿ ಸಾಗಿ ಬಂದಿದೆ. ಪಟದ ಗತ್ತುಗಳ ಹೆಜ್ಜೆಗಳ ಬಗ್ಗೆ ಮಾತನಾಡುತ್ತಾ ಜನಪದ ಕಲೆಗಳು ದೈಹಿಕ ವ್ಯಾಯಾಮವಾಗಿವೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ತಿಳಿಸಿದರು.

ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಲೋಕಸಿರಿ ತಿಂಗಳ ಅತಿಥಿ-119, ನಾಡೋಜ ಎಚ್. ಎಲ್ ನಾಗೇಗೌಡರ ನೆನಪಿನ ಪ್ರತಿ ತಿಂಗಳ ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಗೇಗೌಡರು ಕಟ್ಟಿದ ಜಾನಪದ ಲೋಕ ನಶಿಸುತ್ತಿರುವ ಕಲೆ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.

ಮ್ಯಾನೇಜಿAಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮಾತನಾಡಿ, ಕಲೆ ಕಲಾವಿದರನ್ನು ಗೌರವಿಸುವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಕೆಲಸವನ್ನು ನಾವು ನಿರಂತರವಾಗಿ ಮಾಡುತ್ತೇವೆ ಎಂದರು.

ಯಕ್ಷಗಾನ ಜಾನಪದ ನೃತ್ಯ ಪಟು ರೇಣುಕಾಪ್ರಸಾದ್ ಮಾತನಾಡಿ, ಜಾನಪದ ಲೋಕದಲ್ಲಿ ಪ್ರತಿ ವರ್ಷವೂ ಜಾನಪದ ಡಿಪ್ಲೋಮಾ ಮೂಲಕ ವಿವಿಧ ಕಲೆಗಳ ತರಬೇತಿ ನೀಡುವ ಮೂಲಕ ಕಲೆಯನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿ ಗುರುತಿಸಲಾದ ಕಲಾವಿದರನ್ನು ಬೇರೆ ಬೇರೆ ಸಂಘಟನೆಯವರು ಕರೆದು ಗೌರವಿಸುತ್ತಾರೆ ಎಂದರು.

ರಾಮಾಯಣ, ಕುರುಕ್ಷೇತ್ರದಲ್ಲಿ ನಟಿಸುತ್ತಿದ್ದ ಬಗ್ಗೆ ರಾವಣ ದರ್ಬಾರ್ ಹಾಡನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅವರ ತಂಡದ ರಾಮಚಂದ್ರಪ್ಪ ಅವರು ಪಟಕುಣಿತದ ಗತ್ತುಗಳನ್ನು ಅಭಿನಯದ ಮೂಲಕ ತೋರಿಸಿಕೊಟ್ಟರು. ಚಿಕ್ಕನರಸಯ್ಯ ಅವರು ಕಾಡಪ್ಪ ಅವರು ತಮಗೆ ತರಬೇತಿ ನೀಡಿದ ಬಗ್ಗೆ ವಿವರಿಸಿದರು.

ಸು.ತ. ರಾಮೇಗೌಡ ಮಾತನಾಡಿದರು. ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಸರಸವಾಣಿ ಸ್ವಾಗತಿಸಿದರು. ಮ್ಯೂಸಿಯಂ ಕ್ಯೂರೇಟರ್ ಡಾ. ರವಿ ಯು.ಎಂ. ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ಹನುಮಂತೇಗೌಡನದೊಡ್ಡಿ ಹಿರಿಯ ಪಟಕುಣಿತ ಕಲಾವಿದರಾದ ಸಂಜೀವಯ್ಯ ಮತ್ತು ತಂಡದವರು, ಡಾ. ಸಂದೀಪ್ ಕೆ.ಎಸ್. ಲೋಕದ ಸಿಬ್ಬಂದಿ, ಡಿಪ್ಲೊಮಾ ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net