ಪಾಪು ಸಿಂಡಿಕೇಟ್ನ 11 ನಿರ್ದೇಶಕರು ಆಯ್ಕೆ: ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಟಿ.ಕೆ.ಯೋಗೇಶ್ (ಪಾಪು)ಅವರ ಸಿಂಡಿಕೇಟ್ನಲ್ಲಿ ಚುನಾವಣೆ ಎದುರಿದ್ದ 15 ಅಭ್ಯರ್ಥಿಗಳಲ್ಲಿ ಮಾಜಿ ಅಧ್ಯ ಟಿ.ಕೆ. ಯೋಗೇಶ್ (ಪಾಪು), ಮಾಜಿ ಖಜಾಂಚಿ ಎಸ್.ಟಿ. ನಾರಾಯಣಗೌಡ, ಮಾಜಿ ನಿರ್ದೇಶಕರಾದ ಬಿ.ವಿ. ಚಂದ್ರಯ್ಯ, ಮೆಹರೀಶ್ (ಮನು), ಟಿ.ಪಿ. ಹನುಮಂತರಾಜು, ಎಂ.ಎ. ಮಾಲಿನಿ, ನಾಗವಾರ ಶಂಭೂಗೌಡ, ಚಕ್ಕೆರೆ ವೆಂಕಟರಾಮೇಗೌಡ, ಎ.ಎಂ. ಅನಂತಮೂರ್ತಿ, ಎನ್.ಎಸ್. ಬಸವರಾಜು, ನಾಗವಾರ ರಂಗಸ್ವಾಮಿ, ಅವರು ಸೇರಿ 11 ನಿರ್ದೇಶಕರು ಗೆಲುವುಸಾಧಿಸಿದ್ದಾರೆ. ಇನ್ನೂ ಸಿಂಡಿಕೇಟ್ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದ 13 ಅಭ್ಯರ್ಥಿಗಳಲ್ಲಿ ಟಿ.ಎಸ್. ಅಭಿಲಾಷ್, ಪುಟ್ಟರಾಜೇಗೌಡ, ಡಿ.ಎಂ. ರವಿ, ಯುಪಿ ಧರಣೀಶ್ ಸೇರಿ ನಾಲ್ವರು ನಿರ್ದೇಶಕರಾಗಿ ಜಯಗಳಿಸಿದ್ದಾರೆ.