ಕುದೂರು: ರಾಷ್ಟ್ರೀಯ ಹೆದ್ದಾರಿ&75ರ ಮರೂರು ಹ್ಯಾಂಡ್ಪೋಸ್ಟ್ ಸರ್ವೀಸ್ ರಸ್ತೆ ಬದಿ ವಾಯುವಿಹಾರ ಮಾಡುತ್ತಿದ್ದಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದವ ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾದರು.
ವರೂರು ಹ್ಯಾಂಡ್ ಪೋಸ್ಟ್ ನಿವಾಸಿ ಗಂಗರಾಜು(60) ಮೃತರು. ಊಟದ ನಂತರ ಸರ್ವೀಸ್ ರಸ್ತೆಯಲ್ಲಿ ಗಂಗರಾಜು ವಾಕ್ ಮಾಡುತ್ತಿದ್ದಾಗ ನೆಲಮಂಗಲ ಕಡೆಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಗಂಗರಾಜು ಚಿಕಿತ್ಸೆಗೆಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.
ಇನ್ನು ಡಿಕ್ಕಿಯಾದ ಬೈಕ್ ತಿಪ್ಪಸಂದ್ರ ಹೋಬಳಿಯ ದಂಡೇನಹಳ್ಳಿ ನಿವಾಸಿ ಶಂಕರ್ ಅವರದ್ದು ಎನ್ನಲಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.