ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ದರ್ಶನ್ಗೌಡ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ನಾರಸಂದ್ರ ಸಮೀಪ ನೀಲಗಿರಿ ಪೋಲ್ಗಳನ್ನು ತುಂಬಿಕೊಂಡು ಟ್ರ್ಯಾಕ್ಟರ್ ರ್ ಹೊರಟಿತ್ತು. ಆದರೆ ಟೆಲರ್ನಿಂದ ಪೋಲ್ಗಳು ಹೊರಗೆ ಬಂದಿದ್ದು, ಇದನ್ನು ಗಮನಿಸದೆ ಆಟೋ ಟೆಲರ್ ಹಿಂಭಾಗಕ್ಕೆ ಡಿಕ್ಕಿಯಾಗಿದೆ. ಆಗ ನೀಲಗಿರಿ ಮರದ ಕಂಬಗಳು ತಾಗಿ ಆಟೋ ನಜ್ಜಗುಜ್ಜಾಗಿದೆ. ಗಂಭೀರ ಗಾಯಗೊಂಡ ದರ್ಶನ್ಗೌಡ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.