ನಗರದ ಸಾತನೂರು ಸರ್ಕಲ್ನಲ್ಲಿ ಶುಕ್ರವಾರ ತಾಲೂಕಿನ ಹೊಂಗನೂರು ಮ್ಯಾಗ್ನೆಟ್ ಶಾಲೆಗೆ ಅಕ್ಕಪಕ್ಕದ 7 ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ತೀರ್ಮಾನ ಅವೈಾನಿಕವಾಗಿದೆ. ಸಂತೆ ಮೊಗೇನಹಳ್ಳಿ, ಹೊಡಿಕೆ ಹೊಸಳ್ಳಿ, ಕನ್ನಿದೊಡ್ಡಿ, ಅಮ್ಮಳ್ಳಿದೊಡ್ಡಿ, ಸುಣ್ಣಟ್ಟ, ಮೊಗಳ್ಳಿ ದೊಡ್ಡಿ, ಚನ್ನಂಕೇಗೌಡನ ದೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದು, ಈ ಶಾಲೆಗಳ ಉಳಿವಿಗಾಗಿ ವಿದ್ಯಾರ್ಥಿ ಸಂಟನೆಯ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದರು.