ಚಿರತೆಯನ್ನೇ ಹಿಮ್ಮೆಟ್ಟಿಸಿದ ನಾಯಿಗಳು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಿಡದಿ: ಸಮೀಪದ ಕಲ್ಲುಗೋಪಹಳ್ಳಿಯಲ್ಲಿ ಗುರುವಾರ ಮುಂಜಾನೆ ಭೇಟೆಯಾಡಲು ಬಂದ ಚಿರತೆಯನ್ನೇ ನಾಯಿಗಳು ಅಟ್ಟಿಸಿಕೊಂಡು ಹೋಗಿದ್ದು, ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮದ ರವಿ ಎಂಬುವರ ಮನೆ ಕಾಂಪೌಂಡ್​ ಹಾರಿ ಒಳ ನುಗ್ಗಿದ ಚಿರತೆ ಮಲಗಿದ್ದ ನಾಯಿಯನ್ನು ಹೊತ್ತೊಯಲು ಯತ್ನಿಸಿದೆ. ಈ ವೇಳೆ 3&4 ನಾಯಿಗಳು ಒಮ್ಮೆಲೆ ಚಿರತೆ ಮೇಲೆ ಮುಗಿ ಬಿದ್ದಿವೆ. ನಾಯಿಗಳು ಚಿರತೆಯತ್ತ ಬರುತ್ತಿದಂತೆ ಚಿರತೆ ಣಾರ್ಧದಲ್ಲಿ ಕಾಂಪೌಂಡ್​ ಹಾರಿ ಅಲ್ಲಿಂದ ಅರಣ್ಯದತ್ತ ಓಡಿ ಹೋಗಿದ್ದು, ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮಕ್ಕೆ ಹೊಂದಿಕೊಂಡಂತೆ ಹುಲ್ತಾರ್​ ಅರಣ್ಯ ಪ್ರದೇಶವಿದ್ದು, ತಿಂಗಳ ಹಿಂದೆ ಒಮ್ಮೆಲೆ 3 ಚಿರತೆಗಳು ಗ್ರಾಮದಲ್ಲಿ ಓಡಾಡಿದ್ದವು. ಸದ್ಯ ಕಾಣಿಸಿಕೊಂಡ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಎರಡು ಕಡೆ ಬೋನುಗಳನ್ನು ಇರಿಸಿದ್ದಾರೆ. ಆದರೆ ಚಿರತೆ ಬೋನಿನತ್ತ ಸುಳಿಯುತ್ತಿಲ್ಲ ಎನ್ನಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net