ಡಿಕೆಶಿ ದೆಹಲಿ ಭೇಟಿ ಸಾಮಾನ್ಯ

ಮಾಗಡಿ ಕಾಂಗ್ರೆಸ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್​.ಸಿ.ಬಾಲಕೃಷ್ಣ ಮಾತನಾಡಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ವೆಂಕಟೇಶ್​, ಬಮುಲ್​ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಟಿಎಪಿಸಿಎಂಎಸ್​ ಅಧ್ಯಕ್ಷ ಶಿವಪ್ರಸಾದ್​, ಸೋಮಣ್ಣ, ದೀಪು, ಕಲ್ಕೆರೆ ಶಿವಣ್ಣ, ಬ್ಯಾಲಕೆರೆ ಚಿಕ್ಕರಾಜು, ಆನಂದ್​, ಮೂರ್ತಿ, ಶಿವಕುಮಾರ್​, ದೊಡ್ಡಿ ಲೋಕೇಶ್​ ಇದ್ದರು.
ಮಾಗಡಿ ಕಾಂಗ್ರೆಸ್​ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್​.ಸಿ.ಬಾಲಕೃಷ್ಣ ಮಾತನಾಡಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ವೆಂಕಟೇಶ್​, ಬಮುಲ್​ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಟಿಎಪಿಸಿಎಂಎಸ್​ ಅಧ್ಯಕ್ಷ ಶಿವಪ್ರಸಾದ್​, ಸೋಮಣ್ಣ, ದೀಪು, ಕಲ್ಕೆರೆ ಶಿವಣ್ಣ, ಬ್ಯಾಲಕೆರೆ ಚಿಕ್ಕರಾಜು, ಆನಂದ್​, ಮೂರ್ತಿ, ಶಿವಕುಮಾರ್​, ದೊಡ್ಡಿ ಲೋಕೇಶ್​ ಇದ್ದರು.
Published on
ಮಾಗಡಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್​ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರನ್ನು ಭೇಟಿ ಮಾಡಿರೋ ವಿಚಾರ ನನಗೆ ಗೊತ್ತಿಲ್ಲ. ಅಲ್ಲಿ ಏನು ಚರ್ಚೆ ಆಗಿದೆಯೋ ಅದೂ ಗೊತ್ತಿಲ್ಲ ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಹೇಳಿದರು.
ಡಿಕೆಶಿ ಅನೇಕ ಬಾರಿ ದೆಹಲಿ ದಂಡಯಾತ್ರೆ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ, ಕೋರ್ಟ್​ ವಿಚಾರವಾಗಿ ದೆಹಲಿಗೆ ಹೋಗಿದ್ದಾರೆ. ಹಾಗೆಯೇ ರಾಜಕೀಯ ವಿಚಾರವಾಗಿಯೂ ಹೋಗಿರಬಹುದು, ತಪ್ಪೇನಿಲ್ಲ.... ಅವರು ಕೆಪಿಸಿಸಿ ಅಧ್ಯಕ್ಷರು, ಹಾಗಾಗಿ ದೆಹಲಿಗೆ ಹೋಗೋದು, ಬರೋದು ಸಾಮಾನ್ಯ ಅಲ್ಲವೇ? ಅವರು ಬಂದ ನಂತರ ಕುಳಿತು ಚರ್ಚಿಸುತ್ತೇವೆ ಎಂದು ಪಟ್ಟಣದ ಕಾಂಗ್ರೆಸ್​ ಕಚೇರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಬಾಲಕೃಷ್ಣ ತಿಳಿಸಿದರು.
ಈ ಅವಧಿಯಲ್ಲೇ ಡಿಕೆಶಿ ಸಿಎಂ ಆಗುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಅದು ಕಾಂಗ್ರೆಸ್​ ಹೈಕಮಾಂಡ್​ಗೆ ಬಿಟ್ಟದ್ದು, ಈ ಗೊಂದಲ ನಿವಾರಿಸಿ ಎಂದು ಒತ್ತಾಯಿಸಿದ್ದೇವೆ. ಡಿಕೆಶಿಗೆ ಅವಕಾಶ ಕೊಡಿ ಎಂದು ನಾವು ಹೈಕಮಾಂಡ್​ಗೆ ಮನವಿ ಮಾಡಬಹುದು, ಆದರೆ ಟೈಂ ನೋಡಿ ಕ್ರಮ ಕೈಗೊಳ್ಳೋದು ವರಿಷ್ಠರಿಗೆ ಬಿಟ್ಟದ್ದು ಎಂದರು.
ಪ್ರಯತ್ನ ವಿಲ ಆಗಿಲ್ಲ
ನಾವು ಮಂತ್ರಿ ಸ್ಥಾನಕ್ಕಾಗಿ ಮಾತ್ರ ದೆಹಲಿಗೆ ಹೋಗಿದ್ವಿ. ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆಗಳು ಆಗ್ತಿವೆ. ಡಿಕೆಶಿ ಪ್ರಯತ್ನ ವಿಫಲ ಆಗಿಲ್ಲ. ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಡಿಸಿಎಂ ಹೇಳಿದ್ದಾರೆ. ಅದಕ್ಕೆ ಹೈಕಮಾಂಡ್​ ಸ್ಪಷ್ಟನೆ ಕೊಡಬೇಕು ಎಂದ ಬಾಲಕೃಷ್ಣ, ಡಿ.ಕೆ.ಶಿವಕುಮಾರ್​ ಸಿಎಂ ಆಗುತ್ತಾರೆ ಎಂದು ಒಕ್ಕಲಿಗರು ಕಾಂಗ್ರೆಸ್​ ಪರವಾಗಿದ್ದರು. ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಎಲ್ಲ ಜನಾಂಗದವರೂ ಮತ ಹಾಕಿದ್ದಾರೆ. ನಮ್ಮವರು ಸಿಎಂ ಆಗ್ತಾರೆ ಎಂಬ ಆಸೆಗೆ ಒಕ್ಕಲಿಗರು ಹೆಚ್ಚು ಮತ ಹಾಕಿರಬಹುದು, ಇಡೀ ಒಕ್ಕಲಿಗರೇ ಹಾಕಿಲ್ಲ. ಸಿಎಂ ಮಾಡಲಿಲ್ಲ ಎಂದು ವ್ಯತಿರಿಕ್ತ ಪರಿಣಾಮ ಏನೂ ಆಗುವುದಿಲ್ಲ. ಡಿ.ಕೆ.ಶಿವಕುಮಾರ್​ಸಿಎಂ ಆಗಬೇಕು ಎಂಬುದು ಒಕ್ಕಲಿಗರು ಸೇರಿದಂತೆ ಎಲ್ಲರಿಗೂ ಆಸೆ ಇದೆ ಎಂದರು. ಮೇನಲ್ಲಿ ಸರ್ಕಾರ ಪತನ ಹೊಂದಿ ರಾಜ್ಯಪಾಲರ ಆಳ್ವಿಕೆ ಬರಲಿದೆ ಎಂಬ ಸುರೇಶ್​ಗೌಡ ಮಾತಿಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಈ ಬಗ್ಗೆ ಸುರೇಶ್​ಗೌಡ ಅವರಿಗೆ ಮಾಹಿತಿ ಇರಬಹುದು, ನಮಗೆ ಗೊತ್ತಿಲ್ಲ. ರಾಜ್ಯಪಾಲರ ಆಳ್ವಿಕೆ ಬರಲಿ ಎಂಬ ಆಸೆ ಅವರಿಗೆ ಇರಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net