ಭೂ ಮಾಲೀಕರಿಗೆ ಪರಿಹಾರದ ಚೆಕ್​ ವಿತರಣೆ

ರಾಮನಗರದ ಜಿಬಿಡಿಎ ಕಚೇರಿಯಲ್ಲಿ ಮೂರನೇ ಹಂತದಲ್ಲಿ ಭೂ ಮಾಲೀಕರಿಗೆ ಪರಿಹಾರದ ಚೆಕ್​ ಮತ್ತು ನಿವೇಶನ ದೃಡೀಕರಣ ಪತ್ರಗಳನ್ನು ಜಿಬಿಡಿಎ ಅಧ್ಯಕ್ಷ ಗಾಣಕಲ್​ ನಟರಾಜು ವಿತರಿಸಿದರು. ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಪ್ರಸನ್ನ ಸೇರಿ ಫಲಾನುಭವಿ ರೈತರು ಇದ್ದರು.
ರಾಮನಗರದ ಜಿಬಿಡಿಎ ಕಚೇರಿಯಲ್ಲಿ ಮೂರನೇ ಹಂತದಲ್ಲಿ ಭೂ ಮಾಲೀಕರಿಗೆ ಪರಿಹಾರದ ಚೆಕ್​ ಮತ್ತು ನಿವೇಶನ ದೃಡೀಕರಣ ಪತ್ರಗಳನ್ನು ಜಿಬಿಡಿಎ ಅಧ್ಯಕ್ಷ ಗಾಣಕಲ್​ ನಟರಾಜು ವಿತರಿಸಿದರು. ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಪ್ರಸನ್ನ ಸೇರಿ ಫಲಾನುಭವಿ ರೈತರು ಇದ್ದರು.
Published on
ರಾಮನಗರ: ಗ್ರೇಟರ್​ ಬೆಂಗಳೂರು ಸಮಗ್ರ ಉಪನಗರ ಯೋಜನೆ ಭೂ ಸ್ವಾಧಿನಕ್ಕೆ ಒಪ್ಪಿಗೆ ಸೂಚಿಸಿದ ಭೂ ಮಾಲೀಕರಿಗೆ ಗುರುವಾರ 46 ಕೋಟಿ ರೂ. ಮೊತ್ತದ ಪರಿಹಾರ ಚೆಕ್​ ಹಾಗೂ ನಿವೇಶನ ದೃಢೀಕರಣ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ರಾಮನಗರದ ಜಿಬಿಡಿಎ ಕಚೇರಿಯಲ್ಲಿ ಮೂರನೇ ಹಂತದಲ್ಲಿ ಭೂ ಮಾಲೀಕರಿಗೆ ಪರಿಹಾರ ವಿತರಿಸಲಾಯಿತು. ಗುರುವಾರ ಒಟ್ಟು 17 ಭೂ ಮಾಲೀಕರಿಗೆ ಒಟ್ಟು 46.7 ಕೋಟಿ ರೂ. ಮೊತ್ತದ ಚೆಕ್​ಗಳನ್ನು ವಿತರಿಸಲಾಯಿತು. ಇದರ ಜತೆಗೆ ಇಬ್ಬರು ರೈತರಿಗೆ ನಿವೇಶನ ದೃಢೀಕರಣ ಪ್ರಮಾಣ ಪತ್ರವನ್ನು ಅಧ್ಯಕ್ಷ ಗಾಣಕಲ್​ ನಟರಾಜು ನೀಡಿದರು.
ಈ ವೇಳೆ ಗಾಣಕಲ್​ ನಟರಾಜು ಮಾತನಾಡಿ, ಇದುವರೆಗೆ ಒಟ್ಟು 27 ಫಲಾನುಭವಿಗಳಿಗೆ ಪ್ರಾಧಿಕಾರದಿಂದ ಚೆಕ್​ ವಿತರಣೆ ಮಾಡಿದ್ದು, ಮೂರನೇ ಹಂತದಲ್ಲಿ ಇಂದು 17 ರೈತರಿಗೆ 46.7 ಕೋಟಿ ರೂ. ಹಾಗೂ ನಿವೇಶನ ದೃಢೀಕರಣ ಪತ್ರವನ್ನು ನಟರಾಜು, ಲೋಕೇಶ್​ ಅವರಿಗೆ ವಿತರಣೆ ಮಾಡಿದ್ದೇವೆ ಎಂದರು. ಇದುವರೆಗೆ ಭೂಮಿ ಕೊಡಲು ಒಪ್ಪಿರುವ 54 ರೈತರಿಗೆ ಸ್ವಾದಿನ ಪರಿಹಾರ ಚೆಕ್​ ವಿತರಣೆ ಮಾಡಿದ್ದೇವೆ. ಪ್ರತಿನಿತ್ಯ ಅಗತ್ಯ ದಾಖಲೆಗಳನ್ನು ಒದಗಿಸುತ್ತಿದ್ದಾರೆ. ಅವರಿಗೆ ಸೂಕ್ತ ಪರಿಹಾರದ ಹಣ ನೀಡಲು ಪ್ರಾಧಿಕಾರದ ಅಧಿಕಾರಿಗಳು ಕ್ರಮವಹಿಸುತ್ತಿದ್ದಾರೆ. ಆಗಾಗಿ ಎಲ್ಲರಿಗೂ 30 ನಿಮಿಷಗಳಲ್ಲಿ ಆರ್​ಟಿಜಿಎಸ್​ ಮೂಲಕ ಪಾವತಿಯಾಗಲಿದೆ. ಯಾವ ದಲ್ಲಾಳಿಗಳಿಗೂ ಅವಕಾಶ ನೀಡದೆ ರೈತರಿಗೆ ಹಣ ಪಾವತಿಯಾಗುತ್ತಿದೆ. ರೈತರು ಸುಳ್ಳು ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು.
ಪರಿಹಾರ ಪಡೆದ ಲಾನುಭವಿಗಳು : ವಿ.ವೆಂಕಟೇಶ್​, ಅರುಣ, ಉಮೇಶ್​, ಶುಭೋಜಿತ್​, ಪ್ರಸಾದ್​, ಶಾಂತಮ್ಮ, ಗೀತಾ, ಉಮಾಬಲಗವಿ, ಮಂಜುಳಾ, ಈಶ್ವರ್​ ರೆಡ್ಡಿ, ದೊಡ್ಡಾಂಜನಭೋವಿ, ತಿಮ್ಮಯ್ಯ, ಗೌರಮ್ಮ, ದುಂಡಮಾದಯ್ಯ, ನಾರಾಯಣರೆಡ್ಡಿ, ನಟರಾಜು ಕೆ.ಪಿ ನರಸಿಂಹ ರೆಡ್ಡಿ ಚೆಕ್​ ಪಡೆದುಕೊಂಡರು.
ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ವಿಶೇಷ ಕರ್ತವ್ಯಾಧಿಕಾರಿ ಮಾರುತಿ ಪ್ರಸನ್ನ ಸೇರಿ ಫಲಾನುಭವಿ ರೈತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net