ಬಿಡದಿ: ಪುರಸಭೆಯ ವಾರ್ಡ್ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದ್ದು, ಬಡಾವಣೆಗಳು ಅಭಿವೃದ್ಧಿ ಕಾಣುವುದಾದರೂ ಹೇಗೆ ? ಎಂದು ಸದಸ್ಯರು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ರೋಶಗೊಂಡರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಅಧ್ಯೆ ಭಾನುಪ್ರಿಯ ಸಂಪತ್ ಕುಮಾರ್ ಅಧ್ಯತೆಯಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಾಮಾನ್ಯ ಸಭೆಯ ಆರಂಭದಲ್ಲೇ ಸದಸ್ಯರು ಅನುದಾನ ಹಂಚಿಕೆಯ ತಾರತಮ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯ ಸೋಮಶೇಖರ್ ಮಾತನಾಡಿ, ಆಡಳಿತ ಪದ ಸದಸ್ಯರ ವಾರ್ಡ್ಗಳಿಗೆ 1 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಆದರೆ ಇತರರ ವಾರ್ಡ್ಗಳಿಗೆ ಕೇವಲ 20&30 ಲ ರೂ. ಮಾತ್ರ ಕೊಡಲಾಗಿದೆ. ಆಮೂಲಕ ಪುರಸಭೆ ನಿಧಿ ಹಂಚಿಕೆಯಲ್ಲಿ ಮಲತಾಯಿಧೋರಣೆ ಅನುಸರಿಸಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಅನುದಾನ ಬಿಡುಗಡೆಯ ಬಗ್ಗೆ ಮಾಹಿತಿ ಇಲ್ಲವೇ?
ಕಾಂಗ್ರೆಸ್ ಸದಸ್ಯ ಸಿ.ಉಮೇಶ್ ಸಭೆಯಲ್ಲಿ ಎದ್ದುನಿಂತು, ಪುರಸಭೆ 23 ವಾರ್ಡುಗಳಿಗೆ ಬಿಡುಗಡೆಯಾಗಿರುವ ಒಟ್ಟು ಅನುದಾನದ ಪಟ್ಟಿಯನ್ನು ಓದುತ್ತಿರುವ ವೇಳೆ 12ನೇ ವಾರ್ಡ್ ಸದಸ್ಯ ರಾಕೇಶ್ ಕುಮಾರ್ ಆೇಪಿಸಿದರು. ತಮ್ಮ ವಾರ್ಡಿಗೆ 1.65 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿಯಿಲ್ಲ. ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರ ಯಾರೆಂದು ಗೊತ್ತಿಲ್ಲ ಎಂದರು. ಇದಕ್ಕೆ 15ನೇ ವಾರ್ಡಿನ ಸದಸ್ಯೆ ಬಿಂದಿಯಾ ಧ್ವನಿಗೂಡಿಸಿ, ನನ್ನ ವಾರ್ಡಿಗೆ 1 ಕೋಟಿ ರೂ. ಬಿಡುಗಡೆಯಾಗಿರುವ ವಿಚಾರವೇ ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇ&ಖಾತಾ ಆಂದೋಲನದಿಂದ ಆದಾಯ ಹೆಚ್ಚು
ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಇ&ಖಾತಾ ಆಂದೋಲನ ಅಭಿಯಾನ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಪುರಸಭೆಗೆ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸೂಚನೆಯಂತೆ ಹಣವನ್ನು ಪಟ್ಟಣದ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ. ಎಲ್ಲ ಕಾಮಗಾರಿಯನ್ನು ಇ&ಟೆಂಡರ್ ಮೂಲಕ ಗುತ್ತಿಗೆ ನೀಡಿರುವುದರಿಂದ ಯಾರೂ ಮೋಸ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸದಸ್ಯ ಸಿ.ಉಮೇಶ್ ಸಭೆಗೆ ಮಾಹಿತಿ ನೀಡಿದರು.
ತರಾತುರಿಯಲ್ಲಿ ಬಿಲ್ ಮಾಡಿರುವುದು ಏಕೆ?
ಹಿಂದಿನ ಸಭೆಯಲ್ಲಿ ಅಧ್ಯರ ಅಪ್ಪಣೆ ಮೇರೆಗೆ ಚರ್ಚಿಸಿದ ಕಾಮಗಾರಿಗಳನ್ನು ತರಾತುರಿಯಲ್ಲಿ ಕೆಲಸ ಮುಗಿಸಿ ಬಿಲ್ ಮಾಡಿಕೊಂಡಿರುವುದು ಏಕೆ ಎಂದು ಜೆಡಿಎಸ್ ಸದಸ್ಯ ರಾಕೇಶ್ ಪ್ರಶ್ನಿಸಿದರು. ವರ್ಷದ ಅವಧಿಯಲ್ಲಿ 25 ಕೋಟಿ ರೂ. ಟೆಂಡರ್ ನಡೆದಿದೆ. ಪುರಸಭೆ ಬಜೆಟ್ಅನ್ನು ಗಾಳಿಗೆ ತೂರಿ ಎಷ್ಟು ಬೇಕಾದರೂ ಮಾಡಬಹುದೆ ? ಎಂದು ಮತ್ತೋರ್ವ ಜೆಡಿಎಸ್ ಸದಸ್ಯ ಎಚ್. ನಾಗರಾಜು ಪ್ರಶ್ನೆ ಮಾಡಿದರು.
ಮಂಚನಾಯಕನಹಳ್ಳಿ ಪುರಸಭೆ ವ್ಯಾಪ್ತಿಗೆ
ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿ ಹಾಗೂ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ ವಾಜರಹಳ್ಳಿಯನ್ನು ಬಿಡದಿ ಪುರಸಭೆ ವ್ಯಾಪ್ತಿಗೆ ಸೇರಿಸಿ ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಸಾಮಾನ್ಯ ಸಭೆಯಲ್ಲಿ ರ್ನಿಣಯಿಸಲಾಯಿತು.
ಸದಸ್ಯರಾದ ಬಿಂದಿಯಾ ಮಂಜು, ಮನು ಲೋಕೇಶ್, ಸರಸ್ವತಮ್ಮ, ಯಲ್ಲಮ್ಮ, ಲಲಿತಾ ನರಸಿಂಹಯ್ಯ, ಮಹಿಮಾಕುಮಾರ್ ಹಾಗೂ ಅಧಿಕಾರಿಗಳು ಇದ್ದರು.